ಉಡುಪಿಕಾಪುಕಾರ್ಕಳಕುಂದಾಪುರದಕ್ಷಿಣ ಕನ್ನಡಪುತ್ತೂರು-ಸುಳ್ಯಬೆಳ್ತಂಗಡಿ-ಬಂಟ್ವಾಳಬೈಂದೂರುಬ್ರಹ್ಮಾವರಮಂಗಳೂರುಮೂಲ್ಕಿ-ಮೂಡುಬಿದ್ರಿಹೆಬ್ರಿ

ಉಡುಪಿಯ ಟೈಮ್ಸ್ ಸ್ಕ್ವೇರ್ ಮಾಲ್ ನಲ್ಲಿ ‘ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್’ ಹೋಟೆಲ್ ಶುಭಾರಂಭ

ಉಡುಪಿ: ಉಡುಪಿಯ ಹೃದಯಭಾಗ ಕಲ್ಸಂಕದಲ್ಲಿರುವ ಟೈಮ್ಸ್ ಸ್ಕ್ವೇರ್ ಮಾಲ್ ನಲ್ಲಿ ‘ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್’ ಹೋಟೆಲ್ ಇಂದು ಶುಭಾರಂಭಗೊಂಡಿತು.

ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ‌ ಶ್ರೀಪಾದರು ಮತ್ತು ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಜಂಟಿಯಾಗಿ ನೂತನ ಹೋಟೆಲ್ ಅನ್ನು ಉದ್ಘಾಟಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿದ ಪೇಜಾವರ ಶ್ರೀಗಳು, ಶ್ರೀಕೃಷ್ಣನ ಉಡುಪಿಗೆ ಜಯರಾಮ್ ಬನಾನ್ ಅವರು ಈ ಹೋಟೆಲ್ ಮೂಲಕ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಶ್ರೀ ಕೃಷ್ಣನ ಅನುಗ್ರಹದಿಂದ ನೂತನ ಹೋಟೆಲ್ ಯಶಸ್ವಿಯಾಗಲಿ ಎಂದು ಹಾರೈಸಿದರು.

ಸುಬ್ರಹ್ಮಣ್ಯ ಶ್ರೀಗಳು, ಉಡುಪಿ ಆಹಾರೋದ್ಯಮ ಮತ್ತು ಆಧಾರೋಪಚಾರಕ್ಕೆ ಪ್ರಸಿದ್ದವಾಗಿದೆ. ಆದ್ದರಿಂದ ಇಂತಹ ಹೋಟೆಲ್ ಉಡುಪಿಗೆ ಅಗತ್ಯವಿತ್ತು‌. ಬಹಳ ಪರಿಶ್ರಮಿಯಾಗಿರುವ ಜಯರಾಮ್ ಬನಾನ ಅವರು, ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದು, ತಮ್ಮ ಸಮರ್ಥ ಆಡಳಿತದಿಂದ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.

ಇದಕ್ಕೆ ಮೊದಲು ಉಡುಪಿಯ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೋ ಅವರು ಭೇಟಿ ನೀಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಾಸಕ ಯಶ್ಪಾಲ್ ಸುವರ್ಣ, ಸುನೀಲ್ ಕುಮಾರ್, ಬಿಜೆಪಿ ಮುಖಂಡ ಮಟ್ಟಾರ್ ರತ್ನಾಕರ್ ಹೆಗ್ಡೆ, ಜಗದೀಶ್ ಅಧಿಕಾರಿ, ಓಶಿಯನ್ ಪರ್ಲ್ ಸಂಸ್ಥೆಯ ಸ್ಥಾಪಕ ಜಯರಾಮ್ ಬನಾನ್, ಮ್ಯಾನೇಜಿಂಗ್ ಡೈರೆಕ್ಟರ್ ರೋಷನ್ ಬನಾನ್, ಉಪಾಧ್ಯಕ್ಷರಾದ ಗಿರೀಶ್ ಮತ್ತು ಶಿವಕುಮಾರ್, ಪ್ರಧಾನ ವ್ಯವಸ್ಥಾಪಕ ಪ್ರಶಾಂತ್ ಆಚಾರ್ಯ, ಟೈಮ್ಸ್ ಸ್ಕ್ವೇರ್ ಮಾಲ್ ನ ಮಾಲೀಕ ಡಾ. ಜೆರ್ರಿ ವಿನ್ಸಂಟ್ ಡಯಾಸ್, ಮಾಂಡವಿ ಬಿಲ್ಡರ್ಸ್ ನ ಗ್ಲೆನ್ ಡಯಾಸ್, ಜೇಸನ್ ಡಯಾಸ್, ಉದ್ಯಮಿಗಳಾದ ಸಾಯಿರಾಧ ಮನೋಹರ್ ಶೆಟ್ಟಿ, ಇಂದ್ರಾಳಿ ಜಯಕರ್ ಶೆಟ್ಟಿ, ಇಬ್ರಾಹಿಂ ಕೋಡಿ, ಮಾಜಿ ಶಾಸಕ ರಘುಪತಿ ಭಟ್ ಉಪಸ್ಥಿತರಿದ್ದರು.

ಈ ಹೋಟೆಲ್ ನಲ್ಲಿ “ಗ್ರ್ಯಾಂಡ್ ದಿ ಪೆಸಿಫಿಕ್ 1 ಹಾಲ್” ಸುಮಾರು 2000 ಅತಿಥಿಗಳಿಗೆ ಸ್ಥಳಾವಕಾಶ ಕಲ್ಪಿಸುತ್ತದೆ. ಇದರಲ್ಲಿ ಮದುವೆಗಳು, ದೊಡ್ಡ ದೊಡ್ಡ ಸಮ್ಮೇಳನಗಳು ಮತ್ತು ಅದ್ಧೂರಿಯ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲಕರವಾಗಿದೆ. ‘ಪೆಸಿಫಿಕ್ 2’ ಹಾಲ್ ಮಧ್ಯಮ ಗಾತ್ರದ ಕಾರ್ಯಕ್ರಮಗಳಿಗೆ ಸೂಕ್ತವಾಗಿದ್ದು, ಇದು ಸುಮಾರು 250 ಮಂದಿ ಅತಿಥಿಗಳಿಗೆ ಅವಕಾಶ ಕಲ್ಪಿಸಲಿದೆ.
ಅತ್ಯುತ್ತಮ ದರ್ಜೆಯ ವಿನ್ಯಾಸ, ಒಳಾಂಗಣಗಳನ್ನು ಹೊಂದಿರುವ ಈ ಹೋಟೆಲ್‌ನಲ್ಲಿ ಪ್ರೆಸಿಡೆಂಟಲ್ ಸೂಟ್, ಕ್ಲಬ್ ಸೂಟ್ಸ್, ಫ್ಯಾಮಿಲಿ ಸೂಟ್ ಮತ್ತು ಡಿಲಕ್ಸ್ ರೂಮ್ ಗಳು ಒಟ್ಟು 67 ಐಷಾರಾಮಿ ಕೊಠಡಿಗಳು ಲಭ್ಯವಿದೆ. ಜಿಮ್, ಫಿಟೈಸ್ ಸೆಂಟರ್, ಬಿಜಿನೆಸ್ ಲಾಂಜ್ ಸೌಲಭ್ಯಗಳು ಇಲ್ಲಿವೆ. ಈಜು ಪ್ರಿಯರಿಗೆ ಅನುಕೂಲಕ್ಕಾಗಿ ಅಂತರರಾಷ್ಟ್ರೀಯ ಗುಣಮಟ್ಟದ ಉತ್ತಮ ವಿನ್ಯಾಸದ ಈಜು ಕೊಳವನ್ನು ಸಹ ನಿರ್ಮಾಣ ಮಾಡಲಾಗಿದೆ.

ಆಧುನಿಕ ವಾಸ್ತು ಶೈಲಿಯನ್ನು ಒಳಗೊಂಡಿರುವ ಈ ನೂತನ ಹೋಟೆಲ್‌ನಲ್ಲಿ ದಕ್ಷಿಣ ಹಾಗೂ ಉತ್ತರ ಭಾರತದ ಆಹಾರ ಖಾದ್ಯ, ಕಾಂಟಿನೆಂಟಲ್, ಚೈನಿಸ್ ಆಹಾರ ಉತ್ಪನ್ನಗಳನ್ನು ಹೊಂದಿರುವ, ‘ಕೋರಲ್’ ರೆಸ್ಟೋರೆಂಟ್, ಜಾಸ್ ಸ್ಪೋರ್ಟ್ಸ್ ಬಾರ್ ಮತ್ತು ಜಾಸ್ ಎಕ್ಸಿಕ್ಯೂಟಿವ್ ಲಾಂಜ್‌ಗಳಿವೆ. ವಿವಿಧ ಬಗೆಯ ಪ್ರಾದೇಶಿಕ ಆಹಾರ ಉತ್ಪನ್ನಗಳು ಇಲ್ಲಿನ ಮತ್ತೊಂದು ವಿಶೇಷವಾಗಿದೆ.

Related posts

ನ.4ರಿಂದ 10ರವರೆಗೆ ಚಿಕ್ಕಮಗಳೂರಿನ ದತ್ತ ಪೀಠದಲ್ಲಿ ದತ್ತಮಾಲಾ ಅಭಿಯಾನ; ಉಡುಪಿಯಿಂದ 500ಕ್ಕಿಂತಲೂ ಹೆಚ್ಚು ಕಾರ್ಯಕರ್ತರು ಭಾಗಿ

Udupilive News

ಶಂಕರಪುರದ ಅನಿಲ್ ಕುಮಾರ್ ರವರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

Udupilive News

6 ಜನರ ಮೇಲೆ ಎಫ್‌ಐಆರ್ ದಾಖಲು – ಹನಿಟ್ರ್ಯಾಪ್‌ಗೆ ಮುಮ್ತಾಜ್ ಅಲಿ ಬಲಿ?

Udupilive News

Leave a Comment