ರಾಷ್ಟ್ರೀಯ ಬಿಲ್ಲವ ಈಡಿಗ ನಾಮಧಾರಿ ಧೀವರ ಮಹಾಮಂಡಳಿ ( ರಿ) ವತಿಯಿಂದ ಅಯೋಜಿಸಲಾದ ನಾರಾಯಣ ಗುರುಗಳ ಸಂದೇಶ ಇಂದು ಮತ್ತು ನಾಳೆ ಎನ್ನುವ ವಿಷಯಧಾರಿತ ಭಾಷಣ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮವು ಉಡುಪಿಯ ಬನ್ನಂಜೆ ಬಿಲ್ಲವ ಸಂಘದ ಸಭಾ ಭವನದಲ್ಲಿ ನಡೆಯಿತು.
ನಾರಾಯಣ ಗುರುಗಳ ಸಂದೇಶವು ಸಮಾಜದ ಪ್ರತಿಯೊಬ್ಬರಿಗೂ ತಲುಪಬೇಕು ಎನ್ನುವ ಉದ್ದೇಶದಿಂದ ಸರ್ವಧರ್ಮದ ವಿದ್ಯಾರ್ಥಿಗಳಿಗೆ ಈ ಭಾಷಣ ಸ್ಪರ್ಧೆಯಲ್ಲಿ ಭಾಗಿವಹಿಸಲು ಅವಕಾಶ ನೀಡಲಾಗಿತ್ತು.
ಸ್ಪರ್ಧೆಯ ರಲ್ಲಿ ಪ್ರಥಮ ಬಹುಮಾನವನ್ನು ಅನನ್ಯ,ದ್ವಿತೀಯ ಬಹುಮಾನ ಜುನೈಫ್ ,ತೃತೀಯ ಬಹುಮಾನ ಶ್ರವ್ಯಾ ಪಡೆದುಕೊಂಡಿದ್ದು ಹತ್ತು ಮಂದಿ ಸ್ಪರ್ಧಾಳುಗಳಿಗೆ ಸಮಧಾನಕರ ಬಹುಮಾನವನ್ನು ವಿತರಿಸಲಾಯಿತು.
ಬಹುಮಾನ ವಿತರಿಸಿ ಮಾತನಾಡಿದ ಉಡುಪಿ ಬನ್ನಂಜೆ ಬಿಲ್ಲವ ಸಂಘದ ಅಧ್ಯಕ್ಷ ಮಾಧವ ಬನ್ನಂಜೆ ನಾರಾಯಣ ಗುರುಗಳ ತತ್ವ ದಂತೆ ಒಂದೇ ಜಾತಿ ಒಂದೇ ಮತ ಒಂದೇ ದೇವರು ,ವಿದ್ಯೆಯಿಂದ ಸಂಘಟಿತರಾಗಿ ಎನ್ನುವ ಧ್ಯೆಯೆಯೊಂದಿಗೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವಂತಹ ಕೆಲಸಗಳನ್ನು ಸಂಘಟನೆ ಮಾಡಿಕೊಂಡು ಬಂದಿದೆ. ಮುಂದಿನ ಪಿಳೀಗೆಯ ಮಕ್ಕಳು ಯಾವುದೇ ರೀತಿಯ ದಾರಿ ತಪ್ಪದೇ ನಾರಾಯಣ ಗುರುಗಳ ಅದರ್ಶಗಳನ್ನು ಪಾಲನೆ ಮಾಡುವಂತಾಗಲಿ ,ಗುರುಗಳ ಸಂದೇಶವನ್ನು ಸಮಾಜಕ್ಕೆ ಸಾರುವಂತಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿಕೊಂಡಿದ್ದ ರಾಷ್ಟ್ರೀಯ ಬಿಲ್ಲವ ಈಡಿಗ ನಾಮಧಾರಿ ಧೀವರ ಮಹಾಮಂಡಳಿ ಉಡುಪಿ ಜಿಲ್ಲಾಧ್ಯಕ್ಷರಾದ ಚಂದ್ರ ಶೇಖರ್ ಕಾಪು ಮಾತನಾಡಿ ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳ ಅಹಿಂಸಾವಾದ ಮತ್ತು ಮಾನವಾತವಾದದ ತತ್ವಗಳು ಮಹಾತ್ಮ ಗಾಂಧಿಜೀಯವರನ್ನು ಕೂಡ ಪ್ರೇರೆಪಿಸಿತ್ತು.ಆವರ ತ್ಮತ್ವಗಳು ನಮ್ಮ ದೇಶಕ್ಕೆ ಸ್ವತಂತ್ರ್ಯ ದೊರಕಿಸಿಕೊಡುವಲ್ಲಿ ಮಹತ್ತರ ಪಾತ್ರ ವಹಿಸಿತ್ತು ನಾರಾಯಣ ಗುರುಗಳ ಸಂದೇಶಗಳು ಹಾಗೂ ತತ್ವಗಳು ಒಂದೇ ಸಮುದಾಯಕ್ಕೆ ಸೀಮಿತವಾಗದೆ ಎಲ್ಲಾ ಸಮಾಜಭಾಂಧವರಿಗೂ ತಲುಪಬೇಕು ಎನ್ನುವ ಉದ್ದೇಶ ಸಂಘಟನೆಯದ್ದಾಗಿದೆ .ಮಕ್ಕಳಲ್ಲಿ ಗುರುಗಳ ಸಿದ್ದಾಂತಗಳ ಅರಿವು ಮೂಡಿದಾಗ ಮಾತ್ರ ಮುಂದಿನ ಪೀಳಿಗೆಗೆ ತಲುಪಲು ಸಾಧ್ಯ ಎನ್ನುವ ಕಾರಣಕ್ಕೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಮಲ್ಪೆ ಬಿಲ್ಲವ ಸಮಾಜ ಸೇವಾ ಸಂಘದ ಶತಮಾನೋತ್ಸವ ಸಮಿತಿ ಅಧ್ಯಕ್ಷರಾದ ದಿನೇಶ್ ಜಿ ಸುವರ್ಣ ,ಉಪಸ್ಥಿತರಿದ್ದರು.ಬಿಲ್ಲವ ಈಡಿಗ ನಾಮಧಾರಿ ಧೀವರ ಮಹಾಮಂಡಳಿ(ರಿ) ಇದರ ರಾಜ್ಯ ಉಪಾಧ್ಯಕ್ಷರಾದ ದಿವಾಕರ್ ಸನಿಲ್ ಪ್ರಸ್ತಾವಿಕ ಭಾಷಣ ಮಾಡಿದರು.ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ್ ಜಿ ಕೊಡವೂರು ಕಾರ್ಯಕ್ರಮ ನಿರೂಪಿಸಿದರು,ಕೋಶಾಧಿಕಾರಿ ಉದಯ್ ಸನಿಲ್ ಧನ್ಯವಾದ ಸಮರ್ಪಿಸಿದರು