Blogಅಂತಾರಾಷ್ಟ್ರೀಯ

ಸೋಷಿಯಲ್‌ ಮಿಡಿಯಾದಲ್ಲಿ ಮೊದಲ ರಾತ್ರಿಯ ಪೋಟೋ ಹರಿಬಿಟ್ಟ ಜೋಡಿ! ಸಂಚಲನ ಸೃಷ್ಟಿಸುತ್ತಿವೆ ಫಸ್ಟ್‌ ನೈಟ್‌ ಚಿತ್ರಗಳು!!

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ವೈಯಕ್ತಿಕ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಕ್ರೇಜ್‌ಗಾಗಿ ಹಂಚಿಕೊಳ್ಳುತ್ತಿದ್ದಾರೆ. ಮದುವೆಯಿಂದ ಹಿಡಿದು ಹನಿಮೂನ್ ವರೆಗೆ ಸೋಷಿಯಲ್‌ ಮಿಡಿಯಾದಲ್ಲಿ ಎಲ್ಲವನ್ನೂ ಶೇರ್‌ ಮಾಡಿಕೊಳ್ಳುವುದೇ ಈಗಿನ ಟ್ರೆಂಡ್.. ಇತ್ತೀಚಿಗೆ ಒಂದಿಬ್ಬರು ತಮ್ಮ ಮೊದಲ ರಾತ್ರಿಯ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.‌

ಈಗ ಮದುವೆ ಸೀಸನ್ ನಡೆಯುತ್ತಿದೆ. ಜೀವನದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಲು ಜನರು ತುಂಬಾ ಉತ್ಸುಕರಾಗಿದ್ದಾರೆ. ಆದರೆ ಈ ಕಾಲದಲ್ಲಿ ಮದುವೆಯ ಶೈಲಿಯೇ ಬದಲಾಗುತ್ತಿದೆ. ಮದುವೆಯ ಆಚರಣೆಗಳು ಯೋಜಿತ ಆಚರಣೆಯಾಗಿ ಮಾರ್ಪಟ್ಟಿವೆ. ಕುಟುಂಬದೊಂದಿಗೆ ಮದುವೆಗಳನ್ನು ಆನಂದಿಸುವ ಬದಲು, ಜನರು ಹೆಚ್ಚು ವರ್ಚುವಲ್ ಜಗತ್ತಿಗೆ ತಿಳಿಸಲು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಮದುವೆಯ ಪ್ರಸ್ತಾಪ ಬಂತೆಂದರೆ ಜನರಲ್ಲಿ ಹೊಸ ಆಸಕ್ತಿ ಮೂಡಿದ್ದು, ಮದುವೆ ಕಾರ್ಡ್ ಆಯ್ಕೆಯಿಂದ ಹಿಡಿದು ಹನಿಮೂನ್ ಟೂರ್ ವರೆಗೆ ಎಲ್ಲವೂ ಮೆಮೋರೆಬಲ್‌ ಆಗಿರುವಂತೆ ಮಾಡಲಾಗುತ್ತಿದೆ.. ಆದರೆ ಟ್ರೆಂಡ್‌ನ ಬದಲಾವಣೆಯೊಂದಿಗೆ ಈಗಿನ ಪೀಳಿಗೆಯ ಕೆಲವರು ತಮ್ಮ ಸಂತೋಷದ ಕ್ಷಣವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.. ಇಷ್ಟೇ ಅಲ್ಲ.. ಫ್ರಿ ವೆಡ್ಡಿಂಗ್‌ ಶೂಟ್‌ನಿಂದ ಹಿಡಿದು ಫಸ್ಟ್‌ ನೈಟ್‌ ವರೆಗೂ ಎಲ್ಲ ಪೋಟೋಗಳನ್ನು ಹಂಚಿಕೊಳ್ಳುತ್ತಾರೆ.. ಅಂಥದ್ದೊಂದು ಪೋಸ್ಟ್ ಈಗ ವೈರಲ್ ಆಗಿದ್ದು, ಫೋಟೋ ಶೇರ್ ದಂಪತಿಗಳು ಟೀಕೆಗೆ ಗುರಿಯಾಗಿದ್ದಾರೆ.

ರಾಹುಲ್ ಮತ್ತು ರಾಧಾ 143 ಎಂಬ ಐಡಿ ಹೆಸರಿನ ದಂಪತಿಗಳು ತಮ್ಮ ಫಸ್ಟ್‌ ನೈಟ್ ಫೋಟೋವನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗೆ ಶೀರ್ಷಿಕೆಯಾಗಿ ‘ಇಂದು ನನ್ನ ನೆಚ್ಚಿನ # ಫೋಟೋಗ್ರಫಿ” ಎಂದು ಬರೆದುಕೊಂಡಿದ್ದಾರೆ.. ದಂಪತಿಗಳು ತಮ್ಮ ವಾರ್ಷಿಕೋತ್ಸವವನ್ನು ಗುರುತಿಸಲು ಫೋಟೋಗಳನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಪೋಸ್ಟ್‌ನಲ್ಲಿ ಎರಡು ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.

ಮೊದಲ ಫೋಟೋದಲ್ಲಿ ಹುಡುಗ ಅವಳ ಹಣೆಗೆ ಮುತ್ತಿಡುತ್ತಾನೆ. ಎರಡನೇ ಫೋಟೋ ವಧು ತನ್ನ ಪತಿಗೆ ಚುಂಬಿಸುತ್ತಿರುವುದನ್ನು ತೋರಿಸುತ್ತದೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಲೈಕ್ಸ್ ಪಡೆಯುತ್ತಿದೆ. ಈ ಪೋಸ್ಟ್ ಅನ್ನು 37 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. 3700 ಜನರು ಅದರ ಬಗ್ಗೆ ಕಾಮೆಂಟ್‌ಗಳನ್ನು ಹಂಚಿಕೊಂಡಿದ್ದಾರೆ. ಈ ಜೋಡಿಯನ್ನು ಕೆಲವರು ಇಷ್ಟಪಟ್ಟರೇ ಇನ್ನೂ ಕೆಲವರು ಟೀಕೆ ಮಾಡುತ್ತಿದ್ದಾರೆ.. ಜೊತೆಗೆ ಕಾಮೆಂಟ್ನಲ್ಲಿ ‘ದಯವಿಟ್ಟು ವೀಡಿಯೊವನ್ನು ಸಹ ಪೋಸ್ಟ್ ಮಾಡಿ. ಭವಿಷ್ಯದಲ್ಲಿ ನಾನು ಮದುವೆಯಾಗಬೇಕಾದರೆ ಇದು ನನಗೆ ತರಬೇತಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು’ ಮತ್ತೊಬ್ಬರು ʼಇಂದು ಭಾರತ ಪಾಕಿಸ್ತಾನ ಪಂದ್ಯ, ದಯವಿಟ್ಟು ಪಂದ್ಯವನ್ನು ವೀಕ್ಷಿಸಲು ಮರೆಯಬೇಡಿ’ ಎಂದು ಬರೆದಿದ್ದಾರೆ.

 

Related posts

ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಬೇಡಿಕೆಗಳ ಪರಿಶೀಲಿಸಿ ಸೂಕ್ತ ಕ್ರಮ: ಸಿದ್ದರಾಮಯ್ಯ

Udupilive News

ಬಂಡುಕೋರರ ವಶದಲ್ಲಿ ಸಿರಿಯಾ: 75 ಮಂದಿ ಭಾರತೀಯರು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ

Udupilive News

ಡಾ| ಟಿಎಂಎ ಪೈ ಶಿಕ್ಷಣ ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಪುನರ್ಮಿಲನ

Udupilive News

Leave a Comment