ಉಡುಪಿ

ಮಣಿಪಾಲ:ನಕಲಿ ಪರವಾನಿಗೆ ಬಳಸಿದ ಆರೋಪ – ಕ್ರಷರ್ ಮಾಲಕಿ ವಿರುದ್ಧ ಪ್ರಕರಣ

ಮಣಿಪಾಲ:ನಕಲಿ ಪರವಾನಿಗೆ ಬಳಸಿದ ಆರೋಪ – ಕ್ರಷರ್ ಮಾಲಕಿ ವಿರುದ್ಧ ಪ್ರಕರಣ

ಮಣಿಪಾಲ: ಉಪಖನಿಜ ಸಾಗಾಟಕ್ಕೆ ಸಂಬಂಧಿಸಿ ನಕಲಿ ಪರವಾನಿಗೆ ಬಳಸಿದ ಕ್ರಷರ್ ಮಾಲಕಿಯ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜು.6ರಂದು ವಾಹನವೊಂದರಲ್ಲಿ ಜಿಪಿಎಸ್ ಷರತ್ತು ಉಲ್ಲಂಘನೆ ಮಾಡಿ ಖನಿಜ ಸಾಗಾಟ ಮಾಡುತ್ತಿದ್ದು ಈ ಬಗ್ಗೆ ವಾಹನ ಮಾಲಕ ಸುಂದರ ಎಂಬವರಲ್ಲಿ ಉಡುಪಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಹಾಜಿರಾ ಸಜನಿ ವಿಚಾರಿಸಿ ದಾಗ ಉಪ ಖನಿಜ ಸಾಗಾಣಿಕೆಯ ಪರವಾನಿಗೆ ಯನ್ನು ಪಡೆದು ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದರು.

ಅದರಂತೆ ಮಣಿಪಾಲ ಪೊಲೀಸರು ಪರವಾನಿಗೆ ಮತ್ತು ಬಾರ್ ಕೋಡ್ ಗಳನ್ನು ಪರಿಶೀಲಿಸಿದಾಗ ಐಎಲ್ಎಂಎಸ್ ತಂತ್ರಾಂಶ ದಲ್ಲಿ ಉಪಖನಿಜ ಸಾಗಾಣಿಕಾ ಪರವಾನಿಗೆಗಳನ್ನು ನೀಡಿರುವುದು ಕಂಡುಬಂದಿಲ್ಲ. ಇವುಗಳನ್ನು ಕ್ರಷರ್ ಮಾಲಕಿ ಕೆ.ರಾಧಿಕಾ ಹಿರೇಬೆಟ್ಟು ನಕಲಿ ಮಾಡಿ ಉಪಯೋಗಿಸಿ ರುವುದಾಗಿ ಉಡುಪಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಹಾಜಿರಾ ಸಜನಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Related posts

ಗಂಜೀಫಾ ರಘುಪತಿ ಭಟ್ಟರಿಗೆ ಮಧ್ಯ ಪ್ರದೇಶ ಸರ್ಕಾರದಿಂದ ಕಾಳಿದಾಸ ಸಮ್ಮಾನ್ ಪ್ರಶಸ್ತಿ

Udupilive News

ಜೂ.23ರಂದು ದ.ಕ ಮತ್ತು ಉಡುಪಿ ಜಿಲ್ಲೆಯ 399 ಸ್ಥಳಗಳಲ್ಲಿ ಏಕಕಾಲದಲ್ಲಿ ಬಿಜೆಪಿ ಧರಣಿ.

Udupilive News

ಖಾರ್ವಿಕೇರಿ ದೇವಸ್ಥಾನದ ಚಿನ್ನಾಭರಣ ಕಳ್ಳತನ- ದೇವಸ್ಥಾನದ ಅರ್ಚಕ ಬಂಧನ ,20 ಲಕ್ಷ ಮೌಲ್ಯದ ಚಿನ್ನಾಭರಣ ವಶ

Udupilive News

Leave a Comment