ಉಡುಪಿ

ವಿದ್ಯಾರ್ಥಿವೇತನ ಸಮಸ್ಯೆ ಬಗೆಹರಿಸುವಂತೆ ಎಸ್ ಐ ಓ ವಿದ್ಯಾರ್ಥಿ ಸಂಘಟನೆಯಿಂದ ಉಡುಪಿ ಡಿಸಿಗೆ ಮನವಿ

ಇಡುಪಿ: ಎಸ್‌ ಐ ಓ ವಿದ್ಯಾರ್ಥಿ ಸಂಘಟನೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿಕೆ ಯವರನ್ನು ಭೇಟಿಯಾಗಿ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ರದ್ದುಪಡಿಸಿರುವ ಗಂಭೀರ ವಿಷಯವನ್ನು ಮನದಟ್ಟು ಮಾಡಲಾಯಿತು. ಈ ಹಿಂದೆ ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌ (NSP) ಮೂಲಕ ಲಭ್ಯವಿದ್ದ ಈ ವೇತನವನ್ನು ಇದೀಗ ರದ್ದುಪಡಿಸಲಾಗಿದ್ದು, ಪ್ರಸ್ತುತ ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್‌ (SSP) ಕೇವಲ 8ನೇ ತರಗತಿವರೆಗೆ ಮಾತ್ರ ಸಹಾಯಧನ ನೀಡುತ್ತಿದೆ. ಇದರ ಪರಿಣಾಮವಾಗಿ ಅನೇಕ ವಿದ್ಯಾರ್ಥಿಗಳು ಶಾಲೆ ಬಿಡುವಂತಹ ದುರಂತಕರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ಆದರಿಂದ ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್( SSP ) ನ್ನು 9 ನೇ ಮತ್ತು 10 ನೇ ತರಗತಿಯವರೆಗೆ ವಿಸ್ತರಿಸುವಂತೆ ಹಾಗೂ ಈ ಸಮಸ್ಯೆಯನ್ನು ತಕ್ಷಣದ ಮಟ್ಟಿಗೆ ಗಮನಿಸಿ ಮುಖ್ಯಮಂತ್ರಿಗಳ ಕಚೇರಿಗೆ ಮನವಿಯನ್ನು ಕಳುಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಎಸ್ ಐ ಓ ಉಡುಪಿಯ ಜಿಲ್ಲಾ ಕಾರ್ಯದರ್ಶಿಗಳಾದ ಸಮೀರ್ ತೀರ್ಥಹಳ್ಳಿ , ಸಫಾನ್ , ಅದ್ನಾನ್ , ನಿಹಾಲ್ , ನಿಫಾಲ್ ಮತ್ತು ಸದಸ್ಯರಾದ ಅಯಾನ್ ಮಲ್ಪೆ ,ಅಸೀಮ್ , ರಿಯಾನ್ ನಕ್ವಾ ಉಪಸ್ಥಿತರಿದ್ದರು.

ಎಸ್‌ ಐ ಓ ಉಡುಪಿ ಜಿಲ್ಲೆ

Related posts

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

Udupilive News

ಮುದ್ರಾಡಿ ಧರ್ಮಯೋಗಿ ಮೋಹನ್‌ ಸ್ವಾಮೀಜಿಯವರ ೪ನೇ ಆರಾಧನಾ ಮಹೋತ್ಸವ. ಶ್ರೀ ವಿನಯ್‌ ಗುರೂಜಿ ಅವರಿಗೆ ಧರ್ಮಯೋಗಿ ಸಮ್ಮಾನ

Udupilive News

ಅಪ್ರೆಂಟಿಸ್ ತರಬೇತಿ: ಪತ್ರಿಕೋದ್ಯಮ ಪದವೀಧರರಿಂದ ಅರ್ಜಿ ಆಹ್ವಾನ

Udupilive News

Leave a Comment