ಮಣಿಪಾಲ: ಕಳೆದ ಹತ್ತೊಂಬತ್ತನೇ ತಾರೀಖಿನಂದು ಅನುಮಾನಸ್ಪವಾದವಾಗಿ ಮೃತ ಪಟ್ಟ ಪದ್ಮಬಾಯಿ ಎನ್ನುವವರ ಸಾವು ಕೊಲೆ ಎಂಬುದಾಗಿ ಪೊಲೀಸರು ಪತ್ತೆ ಹಚ್ಚಿದ್ದಾರೆ.ಸ್ವಂತ ಮಗನೇ ತಾಯಿಯ ಕತ್ತಿಗೆ ಶಾಲು ಬಿಗಿದು ಕೊಲೆ ಮಾಡಿರುವ ಬಗ್ಗೆ ಪತ್ತೆ ಹಚ್ಚಲಾಗಿದೆ.ಅರೋಪಿ ಈಶ ನಾಯಕ್ ( 26) ಪೊಲೀಸರು ಬಂಧಿಸಿದ್ದಾರೆ.
ಕಳೆದ ಗುರುವಾರ ಮನೆಯಲ್ಲಿ ಮಲಗಿದ್ದ ಪದ್ಮಬಾಯಿ ಅಲುಗಾಡದಿರುವುದ್ದನ್ನು ಕಂಡ ಶಿಲ್ಪ ಎನ್ನುವವರು ಅವರ ಮಗನಿಗೆ ಕರೆ ಮಾಡಿ ಕರೆಸಿದ್ದರು. ಬಳಿಕ ಇಬ್ಬರು ಪದ್ಮಬಾಯಿಯವರನ್ನು ಚಿಕಿತ್ಸೆಗಾಗಿ ಅಜ್ಜರಕಾಡು ಅಸ್ಪತ್ರೆಗೆ ದಾಖಲಿಸಿದ್ದರು,ಅಸ್ಪತ್ರೆಯಲ್ಲಿ ಪದ್ಮಬಾಯಿ ಮೃತಪಟ್ಟಿದ್ದನ್ನು ವೈದರು ದೃಡಪಡಿಸಿದ್ದರು.ಅದರೆ ಮೃತದೇಹದ ಕುತ್ತಿಗೆ ಭಾಗದಲ್ಲಿ ಕೆಂಪಾಗಿದ್ದು ಯಾರೋ ಒತ್ತಿ ಕೊಂದಿರಬಹುದು ಎಂದು ವೈದರು ಸಂಶಯ ವ್ಯಕ್ತಪಡಿಸಿದ್ದರು.
ಪ್ರಾಥಮಿಕ ಹಂತದಲ್ಲಿ ಯಾರೋ ದುಷ್ಕರ್ಮಿಗಳ ಪದ್ಮಬಾಯಿಯನ್ನು ಕೊಂದಿರಬಹುದು ಎಂದು ಸಂಶಯಿಸಲಾಗಿತ್ತು.
ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಇಳಿದ ಪೊಲೀಸರು ಮಗನನ್ನು ಹಲವು ಬಾರಿ ವಿಚಾರಣೆ ಮಾಡಿದ್ದರು ,ಅದರೆ ಆತ ಸಹಜವಾಗಿಯೇ ಪೊಲೀಸರೊಂದಿಗೆ ವರ್ತಿಸಿದ್ದು,ತನಗೇನು ಗೊತ್ತಿಲ್ಲದಂತೆ ವರ್ತಿಸಿ ಎಂದಿನಂತೆ ಕೆಲಸಕ್ಕೆ ತೆರಳುತ್ತಿದ್ದ,ಅದರೆ ಮೃತದೇಹದ ಪೊರೆನ್ಸಿಕ್ ವರದಿ ಬಂದಿದ್ದು ,ಇದರಲ್ಲಿ
ಇದರಲ್ಲಿ ಬೆಳಗ್ಗೆ 9.22 ರಿಂದ 9.30 ರ ಒಳಗೆ ನಡೆದಿರುವುದಾಗಿ ವರದಿ ಬಂದಿರುತ್ತದೆ.ಹೀಗಾಗಿ ಪದ್ಮಬಾಯಿ ಮಗ ಈಶ ನಾಯಕ್ ಹೇಳಿದ ಹೇಳಿಕೆಗಳು ಹೊಂದಣಿಕೆ ಇಲ್ಲದಿರುವುದು.ಮತ್ತು ಕೊಲೆ ಮಾಡುವ ಸಂಧರ್ಭ ಪದ್ಮಬಾಯಿ ಬಿಡಿಸಿ ಕೊಳ್ಳಲು ಪ್ರಯತ್ನ ಪಟ್ಟಿದ್ದು ಈ ಸಂಧರ್ಭದಲ್ಲಿ ಉಂಟಾದ ಉಗುರಿನ ಗಾಯಗಳು ಅರೋಪಿಯನ್ನು ಕಂಡು ಹಿಡಿಯಲು ಮಹತ್ವದ ಸಾಕ್ಷಿಯಾಯಿತು ಎನ್ನಲಾಗಿದೆ.
ಪದ್ಮಬಾಯಿ ಹಲವು ವಿಚಾರಗಳಿಗೆ ಸಂಭಂಧಿಸಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.ಇದು ಈಶ ನಾಯಕ್ ಗೂ ಸಮಸ್ಯೆ ಉಂಟುಮಾಡಿತ್ತು.ಸಾಲಗಾರರ ಕಾಟದಿಂದ ಬೇಸತ್ತು ಈಶ ನಾಯಕ್ ,ಒಂದು ವೇಳೆ ಪದ್ಮಬಾಯಿ ಮೃತಪಟ್ಟರೆ ಸಾಲಗಾರ ರ ಕಾಟ ತಪ್ಪುತ್ತೆ ಅನ್ನೋ ಕಾರಣಕ್ಕೆ ಕೊಲೆ ನಡೆಸಿದ್ದಾನೆ ಎನ್ನಲಾಗಿದೆ.
ಇದೀಗ ಅರೋಪಿಯನ್ನು ಪೊಲೀಸರು ಬಂಧಿಸಿ ಕಂಬಿ ಎಣಿಸುವಂಗೆ ಮಾಡಿದ್ದಾರೆ.