ಕೊಲ್ಲೂರು.: ಕರಾವಳಿ ಪ್ರವಾಸ ದಲ್ಲಿರುವ ರಾಜ್ಯ ಗೃಹಖಾತೆ ಸಚಿವರಾಗಿರುವ ಜಿ ಪರಮೇಶ್ವರ್ ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ದೇವಿಯ ದರುಶನ ಪಡೆದರು.
ಶನಿವಾರ ಮುಂಜಾನೆ ಶ್ರೀ ಕ್ಷೇತ್ರಕ್ಕೆ ಅಗಮಿಸಿದ ಅವರು ದೇವಿ ದರುಶನ ಪಡೆದು ವಿಶೇಷ ಪೂಜೆ ಸಲ್ಲಿಸದರು.ಈ ಸಂಧರ್ಭದಲ್ಲಿ ಸಚಿವ ಮಾಂಕಾಳ ವೈದ್ಯ ,ಕಾಂಗ್ರೆಸ್ ಕಾರ್ಯಕರ್ತರು ಸಾಥ್ ನೀಡಿದರು.ಈ ಸಂಧರ್ಭದಲ್ಲಿ ದೇವಸ್ಥಾನ ಆಡಳಿತ ವತಿಯಿಂದ ಗೃಹಸಚಿವರನ್ನು ಗೌರವಿಸಲಾಯಿತು.