ಉಡುಪಿ

ಅಹಮದಾಬಾದ್ ವಿಮಾನ ದುರಂತ ಅತ್ಯಂತ ಬೇಸರದ ಸಂಗತಿ : ರಮೇಶ್ ಕಾಂಚನ್

ಉಡುಪಿ: ಗುಜರಾತ್ ನ ಅಹಮದಾಬಾದಿನಿಂದ ಲಂಡನ್ನಿಗೆ ಹೊರಟ್ಟಿದ ವಿಮಾನ ಪತನಗೊಂಡು 241 ಪ್ರಯಾಣಿಕರು ಹಾಗೂ ದುರಂತಕ್ಕೀಡಾದ ವಿಮಾನ ಮೇಘಾನಿ ನಗರದ ವೈದ್ಯಕೀಯ ಕಾಲೇಜಿನ ವಸತಿ ನಿಲಯಕ್ಕೆ ಬಡಿದಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟಿರುವುದು ಅತ್ಯಂತ ನೋವಿನ ವಿಚಾರವಾಗಿದೆ.ಈ ದುರ್ಘಟನೆಯಲ್ಲಿ ಮೃತ ಪಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ.ಅವರ ಕುಟುಂಬ ವರ್ಗಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪರವಾಗಿ ಪ್ರಾರ್ಥಿಸುವುದಾಗಿ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದರು‌.
ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿರುವ ಬಗ್ಗೆ ಉನ್ನತ ಮಟ್ಟದಲ್ಲಿ ಸಮಗ್ರ ತನಿಖೆಯಾಗಲಿ.
ಮುಂದೆ ಇಂತಹ ಅವಘಡಗಳು
ಸಂಭವಿಸಿದಂತೆ ಕೇಂದ್ರ ಸರ್ಕಾರ ವಿಮಾನ ಯಾನ ಸುರಕ್ಷತೆಯ ಬಗ್ಗೆ ಸಮರ್ಪಕ ಕ್ರಮ ಕೈಗೊಳ್ಳುವುದರೊಂದಿಗೆ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ರಮೇಶ್ ಕಾಂಚನ್ ಆಗ್ರಹಿಸಿದರು.

Related posts

ವಿಶೇಷ ಫೋಲೀಸ್ ಠಾಣೆಗಾಗಿ ದ.ಸಂ.ಸ. ಮನವಿ

Udupilive News

ಉಡುಪಿ ನಗರಸಭೆ ಪೌರಾಯುಕ್ತ ರಾಯಪ್ಪಗೆ ಬೀಳ್ಕೊಡುಗೆ

Udupilive News

ಗ್ಯಾರೇಜಿನಲ್ಲಿಟ್ಟಿದ್ದ ಕಾರು ಕಳವು!

Udupilive News

Leave a Comment