ಮಂಗಳೂರುಮಂಗಳೂರು: ಕಾರು ಅಫಘಾತ ಫೋಟೊಗ್ರಾಫರ್ ಸಾವು.\nಮಂಗಳೂರು : ಕಾರ್ಯಕ್ರಮವೊಂದರ ಫೋಟೊಗ್ರಾಫಿಗೆಂದು ಕಾರಿನಲ್ಲಿ ತೆರಳುತ್ತಿದ್ದ ಫೋಟೊಗ್ರಾಫರ್ ಕಾರೊಂದು ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕ ಇದ್ದ ತೋಡಿಗೆ ಮಗುಚಿ ಬಿದ್ದ ಘಟನೆ ಇಂದು ಮುಂಜಾನೆ ನಡೆದಿದೆ.ಅಪಘಾತದ ಲ್ಲಿ ಕಾರು ಚಾಲಾಯಿಸುತ್ತಿದ್ದ ಫೋಟೊಗ್ರಾಫರ್ ಸೂರ್ಯ ನಾರಾಯಣ (48 )ಮೃತಪಟ್ಟಿದ್ದಾರೆ.
ಹೊರಟ ಸೂರ್ಯನಾರಾಯಣ ಪಣಂಬೂರು ಬಳಿಯ ನಂದೀಕೇಶ್ವರ ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮದ ಫೋಟೊಗ್ರಾಫಿಗೆಂದು ತನ್ನ ಕಾರಲ್ಲಿ
ಹೊರಟಿದ್ದರು.ಮಂಗಳೂರು ಉಡುಪಿ ಮದ್ಯೆ ರಾಷ್ಟ್ರೀಯ ಹೆದ್ದಾರಿ ಯ ಮದ್ಯೆ ಕೋಡಿಕಲ್ ಕ್ರಾಸ್ ಬಳಿ ತನ್ನ ಕಾರಿನ ನಿಯಂತ್ರಣ ತಪ್ಪಿ ಸಮೀಪದ ತೋಡಿಗೆ ಬಿದ್ದು ಅಫಘಾತವಾಗಿದೆ.ಈ ಸಂಧರ್ಭದಲ್ಲಿ ಸ್ಥಳೀಯರು ಗಾಯಗೊಂಡ ಸೂರ್ಯ ನಾರಾಯಣ ಇವರನ್ನು ಅಸ್ಪತ್ರೆಗೆ ಸಾಗಿಸಿದ್ದಾರೆ.ದಾರಿ ಮದ್ಯೆ ವಾಹನದಲ್ಲಿ ಅಸುನೀಗಿದ್ದಾರೆ.
ಸೂರ್ಯನಾರಾಯಣ ರವರು ಕಳೆದ ಹಲವು ವರ್ಷಗಳಿಂದ ಉಡುಪಿಯ ಕಿದಿಯೂರು ವರ್ಣ ಲ್ಯಾಬ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.ಇತ್ತೀಚಗಷ್ಟೇ ಅವರು ಕಾಸರಗೋಡು ಜಿಲ್ಲೆಯ ಉಪ್ಪಳ ಬಳಿ ಸ್ವಂತ ಫೋಟೊಗ್ರಾಫಿ ಸ್ಟೂಡಿಯೋ ಅರಂಭಿಸಿದ್ದರು.ಉಡುಪಿಯಲ್ಲಿ ಎಲ್ಲರೊಂದಿಗೂ ಅನೋನ್ಯವಾಗಿದ್ದ ಸೂರ್ಯನಾರಯಣರವರನ್ನು ವರ್ ಸೂರ್ಯ ಎಂದೇ ಕರೆಯಲ್ಪಡುತ್ತಿದ್ದರು.