ಕಡಲನಗರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಂಘರ್ಷ ವಿಕೋಪಕ್ಕೆ ಹೋದ ಬೆನ್ನಲ್ಲೇ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆದಿದೆ. ಗುರುವಾರ ಸಂಜೆ ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಕೆಲವೊಂದು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಹೌದು ಕಡಲ ನಗರಿ ದಕ್ಷಿಣ ಕನ್ನಡ ಜಿಲ್ಲೆ ಅಕ್ಷರಶಃ ಕೋಮು ಸಂಘರ್ಷದಿಂದ ನಲುಗಿ ಹೋಗಿದೆ. ಕೆಲವು ತಿಂಗಳ ಅಂತರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಭೀಕರ ನಡೆದು ಹೋಗಿದೆ. ಸಾರ್ವಜನಿಕ ವಲಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ನಡೆಯುತ್ತಿರುವ ಸಮಯದಲ್ಲಿಯೇ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ, ಮಂಗಳೂರು ಕಮೀಷನರ್ ನನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ತಿಂಗಳ ಅಂತರದಲ್ಲಿ ಕಡಲ ನಗರಿಯಲ್ಲಿ ಮೂರು ಭೀಕರ ಹತ್ಯೆ….!!
ಎಪ್ರೀಲ್ 28 ರಂದು ಕೇರಳದ ಅಶ್ರಫ್ ನನ್ನು ಗುಂಪೊಂದು ಭೀಕರವಾಗಿ ಹತ್ಯೆ ನಡೆಸಿದ್ದರು. ಇದರ ಬೆನ್ನಲ್ಲೇ ಮೇ 1 ರಂದು ಹಿಂದೂ ಕಾರ್ಯಕರ್ತ,ರೌಡಿ ಶೀಟರ್ ಸುಹಾಸ್ ಶೆಟ್ಟಿಯನ್ನು ಕಾರಿನಲ್ಲಿ ಅಟ್ಟಾಡಿಸಿಕೊಂಡು ದುಷ್ಕರ್ಮಿಗಳ ತಂಡವೊಂದು ಬರ್ಬರವಾಗಿ ಹತ್ಯೆ ನಡೆಸಿತ್ತು. ಈ ಹತ್ಯೆ ಪ್ರಕರಣ ಮಾಸುವ ಮುನ್ನವೇ ಇದೇ ತಿಂಗಳು ಮೇ 27 ರಂದು ಬಂಟ್ವಾಳ ದಲ್ಲಿ ರಹೀಂ ಎನ್ನುವ ಮುಸ್ಲೀಂ ಯುವಕನ ಹತ್ಯೆ ನಡೆದಿದೆ.
ಕೋಮು ಸಂಘರ್ಷದಿಂದ ನಲುಗಿದ ದ.ಕ ಕ್ಕೆ ಖಡಕ್ ಐ.ಪಿ.ಎಸ್ ಅಧಿಕಾರಿಗಳ ನೇಮಕ…!!!
ಸಾಲು ಸಾಲು ಹತ್ಯೆಯನ್ನು ಕಂಡ ದಕ್ಷಿಣ ಕನ್ನಡ ಜಿಲ್ಲೆಯ ಕನ್ನಡ ಜಿಲ್ಲೆಯ ಜನರು ನಲುಗಿ ಹೋಗಿದ್ದಾರೆ. ಕಾನೂನು ಸುವ್ಯವಸ್ಥೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಲಕಚ್ಚಿದ ಸಮಯದಲ್ಲಿ ಖಡಕ್ ಪೊಲೀಸ್ ಅಧಿಕಾರಿಗಳು ಬೇಕೆನ್ನುವ ಕೂಗು ಜೋರಾಗತೊಡಗಿತ್ತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಇಬ್ಬರು ಖಡಕ್ ಐ.ಪಿ.ಎಸ್ ಅಧಿಕಾರಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಗೆ ನೇಮಕ ಮಾಡಿ ಆದೇಶ ಹೊರಡಿಸಿದೆ. ಮೂಲತಃ ತಮಿಳುನಾಡಿನವರಾದ ಡಾ.ಅರುಣ್ ಕುಮಾರ್. ಪಾಂಡಿಚೇರಿಯಲ್ಲಿ ಎಮ್. ಬಿ.ಬಿ.ಎಸ್ ಶಿಕ್ಷಣ ಮುಗಿಸಿ, 2014 ರಲ್ಲಿ ಐ.ಪಿ.ಎಸ್ ಪೂರ್ಣಗೊಳಿಸಿದ್ದಾರೆ. ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ, ಉಡುಪಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಾಹಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಒಂದೂವರೆ ವರ್ಷಗಳ ಕರ್ತವ್ಯ ನಿರ್ವಾಹಿದ್ದ ಅರುಣ್ ಕುಮಾರ್ ಅಕ್ರಮ ನಡೆಸುತ್ತಿದ್ದ ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನ ವಾಗಿದ್ದರು. ಡಾ.ಅರುಣ್ ಕುಮಾರ್ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಾಹಿಸಿದ ಸಮಯದಲ್ಲಿ ಜಿಲ್ಲೆಯ ಎಲ್ಲಾ ಅಕ್ರಮ ಗಳಿಗೆ ಬ್ರೇಕ್ ಹಾಕಿದ್ದರು. ದಕ್ಷ ಹಾಗೂ ಖಡಕ್ ಆಗಿದ್ದ ಇವರು ಪಕ್ಷ ಭೇಧವಿಲ್ಲದೆ ತಪ್ಪು ಮಾಡಿದವರಿಗೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತಿದ್ದರು. ಮಣಿಪಾಲ್ಲದಲ್ಲಿ ಲೇಟ್ ನೈಟ್ ಪಬ್, ಅಕ್ರಮ ಮರಳುಗಾರಿಕೆ, ಗಾಂಜಾ ಸೇರಿದಂತೆ ಇನ್ನಿತರ ಅಕ್ರಮ ಚಟುವಟಿಕೆಗೆ ಬ್ರೇಕ್ ಹಾಕಿದ್ರು. ಇವರ ವರ್ಗಾವಣೆಗೆ ಕೆಲ ತಿಂಗಳ ಹಿಂದೆಯೆ ಉಡುಪಿಯಲ್ಲಿ ಪ್ಲಾನ್ ಕೂಡ ನಡೆದಿತ್ತು ಆದರೂ ಅವರ ದಕ್ಷ ಕಾರ್ಯವೈಖರಿಯಿಂದ ಅದು ಸಾಧ್ಯವಾಗಲಿಲ್ಲ. ಸದ್ಯ ಪಕ್ಕದ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಸಮಯದಲ್ಲಿ ಉಡುಪಿಯಲ್ಲಿದ್ದ ದಕ್ಷ, ಖಡಕ್, ಭ್ರಷ್ಟರಿಗೆ ಸಿಂಹ ಸ್ವಪ್ನ ಆಗಿದ್ದ ರಿಯಲ್ ಸಿಂಗಂನನ್ನು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ….
ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಎಸ್.ಪಿ ಆಗಿದ್ದ ಸುಧೀರ್ ರೆಡ್ಡಿ ಮಂಗಳೂರಿನ ನೂತನ ಪೊಲೀಸ್ ಕಮಿಷನರ್…!!
ಇವರು ದಕ್ಷ ಮತ್ತು ಖಡಕ್ ಸೇವೆಯ ಮೂಲಕ ದಕ್ಷಿಣ ಜಿಲ್ಲೆಯ ಜನತೆಗೆ ಚಿರಪರಿತರು. ಹೌದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನರಸಾರಾವ್ ಪೇಟೆಯವರಾದ ಸುಧೀರ್ ಕುಮಾರ್ ರೆಡ್ಡಿ 2010 ರ ಬ್ಯಾಚ್ ಐಪಿಎಸ್ ಅಧಿಕಾರಿ. ಅವರು ಪುದುಚೇರಿ ಇಂಜಿನಿಯರಿಂಗ್ ಕಾಲೇಜಿನಿಂದ ಬಿಟೆಕ್ ಪದವಿ
ಪದವಿ ಪಡೆದಿದ್ದಾರೆ. ಅವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮತ್ತು ಹಿಂದೆ ಬೀದರ್ ಮತ್ತು ಚಿಕ್ಕಬಳ್ಳಾಪುರ, ಬೆಳಗಾವಿ ಜಿಲ್ಲೆಗಳ ಎಸ್ಪಿಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ. ಆ ಬಳಿಕ ಕರ್ನಾಟಕ ಕೇಡರ್ ನಿಂದ ಆಂಧ್ರಪ್ರದೇಶ ಕೇಡರ್ ಗೆ ಡೆಪ್ಟೇಷನ್ ಮೇಲೆ ತೆರಳಿದ್ದ ಅವರು ಮೊದಲು ವಿಜಯವಾಡ, ನಂತರ ಕರ್ನೂಲ್ ಎಸ್‌ಪಿಯಾಗಿ ಸೇವೆ ಸಲ್ಲಿಸಿದರು. ಆ ಬಳಿಕ ಡಾ. ಬಿ.ಆರ್. ಅಂಬೇಡ್ಕರ್ ಕೊನಸೀಮಾ ಜಿಲ್ಲೆಯ ಎಎಸ್‌ಪಿಯಾಗಿ ನಂತರ ಪೂರ್ವ ಗೋದಾವರಿ ಜಿಲ್ಲೆ ಉಸ್ತುವಾರಿ, ಬಳಿಕ ಪೂರ್ಣಾವಧಿ ಎಸ್‌ಪಿಯಾಗಿ ಕೆಲಸ ಮಾಡಿದ್ದರು. 2018 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಸ್.ಪಿಯಾಗಿ ಕಲವು ತಿಂಗಳ ಕಾಲ ಕರ್ತವ್ಯ ನಿರ್ವಾಹಿಸಿದ್ದ ಸುಧೀರ್ ಕುಮಾರ್ ರೆಡ್ಡಿ ಬಿಸಿ ರೋಡಿನಲ್ಲಿ ನಡೆದಿದ್ದ ಶರತ್ ಮಡಿವಾಳ ಹತ್ಯೆ ಪ್ರಕರಣದಲ್ಲಿ ಮಿಂಚಿನ ಕಾರ್ಯಚರಣೆ ನಡೆಸಿ ಅರೋಪಿಗಳ ಎಡೆಮುರಿ ಕಟ್ಟಿದ್ದರು. ತನ್ನ ಕಾರ್ಯವೈಖರಿಯಿಂದ ದಕ್ಷ, ಖಡಕ್ ಪೋಲಿಸ್ ಅಧಿಕಾರಿ ಕರೆಸಿಕೊಂಡಿದ್ದ ಸುಧೀರ್ ಕುಮಾರ್ ರೆಡ್ಡಿ ಮಂಗಳೂರು ಪೊಲೀಸ್ ಕಮಿಷನರ್ ಆಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸಾಲು ಸಾಲು ಹತ್ಯೆಗಳಿಂದ ನಲುಗಿ ಹೋಗಿದ್ದ ದಕ್ಷಿಣ ಕನ್ನಡ ಜಿಲ್ಲೆಗೆ ಇಬ್ಬರು ದಕ್ಷ ಮತ್ತು ಖಡಕ್ ಐ.ಪಿ.ಎಸ್ ಅಧಿಕಾರಿಗಳನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು. ಮಂದೆ ಯಾವರೀತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವರೀತಿ ನೆಲೆಯೂರಲಿದೆ ಎಂದು ಕಾದುನೋಡಬೇಕಾಗಿದೆ….