Blogಉಡುಪಿ

ದೈವಜ್ಞ ಸೊಸೈಟಿ ಬ್ಯಾಂಕ್ ಚುನಾವಣೆಯಲ್ಲಿ ಸತ್ಯನಾರಾಯಣ ಶೇಟ್ ಗೆ ಭರ್ಜರಿ ಗೆಲುವು.ಪ್ರತಿಸ್ಪರ್ಧಿ ಭಾಸ್ಕರ್ ಶೇಟ್ ಗೆ ಹೀನಾಯ ಸೋಲು.

ದೈವಜ್ಞ ಸೊಸೈಟಿ ಚುನಾವಣೆಯಲ್ಲಿ ‌ಸಾಮಾನ್ಯ ಸ್ಥಾನದ‌ ಬದಲು ಪ್ರವರ್ಗ ಎ ಯಲ್ಲಿ ಸ್ಪರ್ಧಿಸಿದ ಭಾಸ್ಕರ ಶೇಟ್ ಹೀನಾಯ ಸೋಲನ್ನ ಕಂಡಿದ್ದಾರೆ.ಇತ್ತೀಚೆಗೆ ನಡೆದ ದೈವಜ್ಞ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 2025-30ನೇ ಸಾಲಿ‌ನ ಆಡಳಿತ ಮಂಡಳಿ ಚುನಾವಣೆಯಲ್ಲಿ ಹಿಂದುಳಿದ ಪ್ರವರ್ಗ ಎ ಮೀಸಲು ಸ್ಥಾನದಿಂದ ಸ್ಪರ್ಧಿಸಿದ ಸತೀಶ್ ಶೇಟ್ ಬೆಂಬಲಿತ
ಸತ್ಯನಾರಾಯಣ ಶೇಟ್ 260 ಮತಗಳ‌ ಅಂತರದಲ್ಲಿ ಭರ್ಜರಿ‌ ಜಯಗಳಿಸಿದ್ದಾರೆ. ಸತ್ಯನಾರಾಯಣ ಶೇಟ್ 354 ಮತಗಳನ್ನ ಪಡೆದರೆ ಪ್ರತಿಸ್ಪರ್ಧಿ ನಾಗೇಶ್ ಶೇಟ್ ಬೆಂಬಲಿತ ಭಾಸ್ಕರ ಶೇಟ್ 94 ಮತಗಳನ್ನ ಪಡೆದು ಎರಡನೇ ಬಾರಿ ಸೋಲನ್ನ ಅನುಭವಿಸುವಂತಾಗಿದೆ. ಅತೀ ಹೆಚ್ಚು ಮತಗಳನ್ನ ಪಡೆದು ಗೆದ್ದ ಸತ್ಯನಾರಾಯಣ ಶೇಟ್ ಅವರನ್ನು ಸೊಸೈಟಿ ಸ್ಥಾಪಕ ನಿರ್ದೇಶಕ ಎನ್. ಚಂದ್ರಶೇಖರ ಶೇಟ್ ಅಭಿನಂದಿಸಿದರು. ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕರು ಗೆಲುವನ್ನ ಸಂಭ್ರಮಿಸಿದರು. ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಯು.ಸತೀಶ್ ಶೇಟ್, ಎಸ್, ಸುಭ್ರಮಣ್ಯ ಶೇಟ್, ಕೆ.ಶಿವಶಂಕರ್ ಶೇಟ್, ಜಿ.ಮಂಜುನಾಥ ಶೇಟ್, ಯು.ಗಿರೀಶ್ ಶೇಟ್, ಎನ್. ಕೃಷ್ಣಮೂರ್ತಿ ಶೇಟ್, ಎನ್.ಸತ್ಯನಾರಾಯಣ ಶೇಟ್, ಯು.ರಾಮ್ ಶೇಟ್, ಚಂದ್ರಶೇಖರ ಶೇಟ್, ರಶ್ಮಿ ಶೇಟ್.ಎಸ್, ಮಾಧವಿ ಶೇಟ್ ಮತ್ತಿತರರು ಉಪಸ್ಥಿತರಿದ್ದರು.

Related posts

ರಸ್ತೆ ಹೊಂಡ ಮಧ್ಯೆ ಬಾಳೆ ಗಿಡ ಇಟ್ಟು ಆಕ್ರೋಶ.ಶಿರ್ವ ಕಟಪಾಡಿ ರಸ್ತೆ ದುರವಸ್ಥೆಗೆ ಬೇಸತ್ತ ಜನ.

Udupilive News

ಪ್ರತಿಷ್ಟಿತ ಭಾರತ್ ಬ್ಯಾಂಕಿಗೆ ಬೆಸ್ಟ್ ಹೆಚ್ ಅರ್ ಮ್ಯಾನೇಜ್ಮೆಂಟ್ ಅವಾರ್ಡ್

Udupilive News

ಗಣೇಶ್ ಪ್ರಸಾದ್ ಜಿ. ನಾಯಕ್ ಅವರಿಗೆ ಪಿ.ಎಚ್.ಡಿ

Udupilive News

Leave a Comment