ಉಡುಪಿಕುಂದಾಪುರದಕ್ಷಿಣ ಕನ್ನಡ

ಚಿಲ್ಲರೆ ನೀಡಿದ್ದಕ್ಕೆ ದಲಿತ ಯುವತಿಯ ಮೇಲೆ ಹಲ್ಲೆ: ಜಾತಿ ನಿಂದನೆ,ಎಸ್ ಪಿ ಭೇಟಿ

ಕುಂದಾಪುರ : ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯ ಮಾವಿನಕಟ್ಟೆಯ ಮೆಡಿಕಲ್ ಶಾಪೊಂದರಲ್ಲಿ ಔಷಧಿ ಖರೀದಿ ಮಾಡಲೆಂದು ಬಂದಿದ್ದ ಮಹಿಳೆಯೊಬ್ಬಳು ಕ್ಷುಲ್ಲಕ ಕಾರಣಕ್ಕೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ದಲಿತ ಸಮುದಾಯದ ಯುವತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವ ಕುರಿತು ಪ್ರಕರಣ ದಾಖಲಾಗಿದೆ.

ಸೋಮವಾರ ಮಧ್ಯಾಹ್ನ 11 ಗಂಟೆಯ ಸುಮಾರಿಗೆ ಯಾಸ್ಮಿನ್ ಎನ್ನುವ ಮಹಿಳೆ ಮೆಡಿಕಲ್ ಅಂಗಡಿಗೆ ಖರೀದಿಗೆಂದು ಬಂದಿದ್ದಾರೆ. ಔಷಧಿ ಖರೀದಿ ಮಾಡಿದ ಬಳಿಕ ಆಕೆ ₹500 ನೋಟು ನೀಡಿದ್ದಾರೆ. ಆಗ ಅಂಗಡಿಯಲ್ಲಿ ಇದ್ದ ಲಕ್ಷ್ಮೀ ಎಂಬ ಯುವತಿ ಚಿಲ್ಲರೆ ನೀಡುವಂತೆ ವಿನಂತಿಸಿದ್ದಾರೆ. ಗ್ರಾಹಕಿ ತನ್ನಲ್ಲಿ ಚಿಲ್ಲರೆ ಇಲ್ಲ, ನೀವೆ ನೀಡಬೇಕು ಎಂದಾಗ ಯುವತಿ ಆನ್‌ಲೈನ್ ಮೂಲಕವೂ ಸಂದಾಯ ಮಾಡಬಹುದು ಎಂದು ಹೇಳಿದ್ದಾರೆ. ಇದನ್ನು ಪ್ರಬಲವಾಗಿ ಆಕ್ಷೇಪಿಸಿದ ಗ್ರಾಹಕಿ ಏಕಾಏಕಿ ಯುವತಿಯ ಮೇಲೆ ಹರಿಹಾಯ್ದಿದ್ದಾರೆ, ಆಕೆಯ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಸೋಮವಾರ ರಾತ್ರಿ ನಗರದ ಸರ್ಕಾರಿ ಉಪವಿಭಾಗೀಯ ಆಸ್ಪತ್ರೆಗೆ ಭೇಟಿ ನೀಡಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು, ಚಿಕಿತ್ಸೆ ಪಡೆಯುತ್ತಿದ್ದ ಸಂತೃಸ್ತ ಯುವತಿಯ ಆರೋಗ್ಯ ವಿಚಾರಿಸಿದ ಬಳಿಕ ಮಾವಿನಕಟ್ಟೆ ಮೆಡಿಕಲ್‌ ಶಾಪ್ ಗೆ ತೆರಳಿ ಪರಿಶೀಲನೆ ನಡೆಸಿದರು.

ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಎಸ್‌ಪಿ ಹರಿರಾಮ್ ಶಂಕರ್, ಘಟನೆ ಕುರಿತಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಂದಾಪುರ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಆರೋಪಿಯ ವಿರುದ್ಧ ಅಗತ್ಯ ಕಾನೂನು ರೀತಿಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

Related posts

ಯುವ ಬರಹಗಾರ ರಾಮಾಂಜಿ ಯವರಿಂ್ ನಮ್ಮ ಜಾತ್ರೆಯ ಹಿಂದೆ ಮುಂದೆ ಕವನ ವಾಚನ.

Udupilive News

ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷರಾಗಿ ಸುಧರ್ಶನ್ ಪೂಜಾರಿ

Udupilive News

ಶಾಲೆಗಳಿಗೆ ಬಾಂಬ್ ಬೆದರಿಕೆ ಮಹಿಳಾ ಇಂಜಿನಿಯರ್ ಅರೆಸ್ಟ್.

Udupilive News

Leave a Comment