ಉಡುಪಿಕಾಪುಕಾರ್ಕಳಕುಂದಾಪುರಬೈಂದೂರುಬ್ರಹ್ಮಾವರಹೆಬ್ರಿ

ಅಂಗವಿಕಲರ ಕಲ್ಯಾಣಕ್ಕಾಗಿ ಜೀವನವನ್ನೇ ಮೂಡಿಪಾಗಿಟ್ಟಿರುವ ಜಗದೀಶ್ ಭಟ್ ಬಗ್ಗೆ ನಿಮಗೆಷ್ಟು ಗೊತ್ತು..?

ಜಗದೀಶ್ ಭಟ್ ಮೂಲತಃ ಅಂಬಲಪಾಡಿ ಮೂಲದವರು ,ಹುಟ್ಟಿದಾಂಗಿನಿಂದ ಒಂದು ಕಾಲಿನ ಸ್ವಾಧೀನ ವಿಲ್ಲದೇ ಅಂಗವೈಕಲ್ಯ ಅವರಿಸಿಕೊಂಡಿತ್ತು.ಅದರೆ ದೃತಿಗೆಡದ ಅವರು ಸ್ವಾಭಿಮಾನದಿಂದ ಬದುಕಲು ಮುಂದಾಗಿದ್ದರು.
ತನ್ನಂತೆ ಅಂಗವೈಕಲ್ಯ ಇರುವ ವಿಕಲಚೇತನರ ಸಹಾಯಕ್ಕಾಗಿ ಮುಂದೆ ನಿಂತರು.ಇಪ್ಪತೈದು ವರ್ಷಗಳ ಹಿಂದೆ ಸಾಮಾಜಿಕ ಕಾರ್ಯಕ್ಕೆ ಹೆಜ್ಜೆಯಿಟ್ಟ ಜಗದೀಶ್ ಮತ್ತೆ ಹಿಂದುರುಗಿ ನೋಡಿಲ್ಲ.ತನ್ನಂತೆ ಇರುವವರ ಕಲ್ಯಾಣಕ್ಕಾಗಿ ಇಡೀ ಜಿಲ್ಲೆ ಯಲ್ಲಿ ಓಡಾಡಿದರು.ಸರಕಾರದಿಂದ ಸಿಗುವಂತಹ ಗುರುತಿನ ಚೀಟಿ ಗಾಗಿ ಹೋರಾಟ ನಡೆಸಿ ಯಶಸ್ವಿಯಾದರು.ರಾಜ್ಯದ ಏಕೈಕ ವಿಕಲಚೇತನ ಹುಲಿ ವೇಷ ತಂಡ ಕಟ್ಟಿಕೊಂಡು ಜನರ ಗಮನ ಸೆಳೆದರು.

ವಿಕಲ ಚೇತನರ ಅಭಿವೃದ್ದಿಗಾಗಿ ಅವರ ಕುಂದು ಕೊರತೆಗಳನ್ನು ಅಲಿಸಲು ಮನೆಮನೆ ಭೇಟಿಯ ಕಾರ್ಯಕ್ರಮಗಳನ್ನು ಹಾಕಿ ,ಅಧಿಕಾರಿಗಳ ಗಮನಕ್ಕೆ ತರುವ ಕೆಲಸದಲ್ಲಿ ಮುಂಚೂಣಿಯಾಗಿ ನಿಂತವರು.

ಎಲ್ಲಾದಕ್ಕಿಂತಲೂ ಮುಖ್ಯವಾಗಿ ಸರಕಾರದಿಂದ ವಿಕಲಚೇತನರಿಗೆ ಧ್ವಿಚಕ್ರ ವಾಹನ ಸವಲತ್ತಿಗಾಗಿ ಹೋರಾಟ ನಡೆಸಿದ್ದರು, ಅಷ್ಟೇ ಅಲ್ಲದೇ ವಿಕಲಚೇತನರಿಗೆ ದ್ವೀಚಕ್ರ ವಾಹನ ತರಭೇತಿಯನ್ನು ಉಚಿತವಾಗಿ ನೀಡುವುದರ ಮೂಲಕ ವಿಕಲಚೇತನರ ಬಾಳಿಗೆ ಬೆಳಕಾಗಿರುವವರು ಜಗಧೀಶ್ ಭಟ್.

ಕೋವಿಡ್ ಲಾಕ್ ಡೌನ್ ಸಂಧರ್ಭ ದಾನಿಗಳಿಂದ ಕಿಟ್ ಗಳನ್ನು ಸಂಗ್ರಹಿಸಿ ಇಡೀ ಜಿಲ್ಲೆಯ ವಿಕಲಚೇತನರ ಮನೆ ಮನೆ ಗೆ ತರಳಿ ಕಿಟ್ ಗಳನ್ನು ವಿತರಿಸಿ ಹಸಿವು ನೀಗಿಸುವ ಕಾರ್ಯ ಮಾಡಿದ್ದ ನಿಸ್ವಾರ್ಥ ಸಮಾಜ ಸೇವಕ ಜಗಧೀಶ್ ಭಟ್.

ಜಗಧೀಶ ಭಟ್ ರವರ ಸಿಸ್ವಾರ್ಥ ಸಾಮಾಜಿಕ ಕಾರ್ಯಕ್ಕೆ ಇಂದು ಇಪ್ಪತೈದನೇ ವರ್ಷ ಪೂರ್ತಿಯಾಗಿದೆ.ತಾನು ಬಡತನದಲ್ಲಿದ್ದು ವಿಕಲಚೇತನರಾಗಿದ್ದರೂ ಕೂಡ ಹಗಲು ರಾತ್ರಿ ತಾನು ದುಡಿದ ಸಂಪಾದನೆಯಲ್ಲಿ ,ತನ್ನಂತೆ ಇರುವವರು ಅಸಾಹಯಕರಿಗೆ ಒಂದಿಷ್ಟು ಪಾಲು ಮೀಸಲಿಡುವ ಮಹಾಪುರಷ ಇವರು.

ಡಾ ಸೋನಿಯಾ ರವರ ಫೀಸ್ ಫೌಂಡೇಶನ್ ಪ್ರಧಾನ ಕಾರ್ಯದರ್ಶಿಯಾಗಿ ವಿಕಲಚೇತನ ಕಲ್ಯಾಣಕ್ಕಾಗಿ ಸದಾ ತನ್ನ ಬದುಕನ್ನು ಮುಡಿಪಾಗಿಟ್ಟಿರುವ ಜಗಧೀಶ್ ಭಟ್ ರವರು ಇನ್ನಷ್ಟು ಸಾಧನೆಯನ್ನು ಮಾಡಲಿ ,ಅಶಕ್ತ ಜೀವಗಳ ಬದುಕಿಗೆ ಇನ್ನಷ್ಟು ಸಹಾಯ ಮಾಡಲು ಆ ಭಗವಂತ ಶಕ್ತಿ ತುಂಬಲಿ ಎಂದು ಹಾರೈಕೆ ನಮ್ಮದು.

Related posts

ಜುಲೈ 4, 5 ಮತ್ತು 6 ರಂದು ಹಲಸು – ಮಾವು – ಕೃಷಿ – ಕೌಶಲ ಬೃಹತ್ ಮೇಳ

Udupilive News

ಛತ್ತೀಸ್ ಗಢದಲ್ಲಿ ಕ್ರೈಸ್ತ ಧರ್ಮ ಭಗಿನಿಯರ ಮೇಲಿನ ದೌರ್ಜನ್ಯ ಖಂಡಿಸಿ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ

Udupilive News

ಉಡುಪಿ ಪತ್ರಕರ್ತರ ‘ರಜತ ಕ್ರೀಡಾ ಸಂಭ್ರಮ’ದ ಜೆರ್ಸಿ ಅನಾವರಣ

Udupilive News

Leave a Comment