ಉಡುಪಿಬೈಂದೂರು

ಬೈಂದೂರಿನಲ್ಲಿ‌ ಕಾಣಿಸಿಕೊಂಡ‌ ಚಡ್ಡಿ ಗ್ಯಾಂಗ್ !

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮತ್ತೆ ಚಡ್ಡಿ ಗ್ಯಾಂಗ್ ಪ್ರತ್ಯಕ್ಷಗೊಂಡು ಆತಂಕ ಸೃಷ್ಟಿಸಿದೆ. ಬೈಂದೂರು ತಾಲೂಕಿನಲ್ಲಿ ಚಡ್ಡಿ ಗ್ಯಾಂಗ್ ಮತ್ತೆ ಸಕ್ರಿಯಗೊಂಡಿದೆ. ಬೈಂದೂರು ತಾಲೂಕಿನ ನಾಗೂರಿನ ಮನೆಯೊಂದರ ಅಂಗಳದಲ್ಲಿ ಚಡ್ಡಿಗ್ಯಾಂಗ್ ಸದಸ್ಯನೋರ್ವ ಓಡಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಖತರ್ನಾಕ್ ಚಡ್ಡಿ ಗ್ಯಾಂಗ್ ನ ಸದಸ್ಯ ಬನಿಯಾನ್, ಚಡ್ಡಿ ಹಾಕಿಕೊಂಡು ಕೈಯಲ್ಲಿ ಚಪ್ಪಲಿ ಹಿಡಿದು ರಾತ್ರಿ ಸಂಚಾರ ಮಾಡುತ್ತಿರುವ ದೃಶ್ಯ ಕಂಡುಬಂದಿದ್ದು, ಮನೆಯ ಸಿಸಿ ಕ್ಯಾಮೆರಾವನ್ನು ನೋಡುತಿದ್ದಂತೆ ಆತ ಅಲ್ಲಿಂದ ಓಡಿಹೋಗಿದ್ದಾನೆ‌‌. ಈ ಘಟನೆಯಿಂದ ಸ್ಥಳೀಯರಲ್ಲಿ ಚಡ್ಡಿ ಗ್ಯಾಂಗ್ ಆತಂಕ ಶುರುವಾಗಿದೆ. ಚಡ್ಡಿ ಗ್ಯಾಂಗ್ ಪತ್ತೆಗಾಗಿ ಬೈಂದೂರು ಪೊಲೀಸರು ಬಲೆ ಬೀಸಿದ್ದಾರೆ

Related posts

ಇಂದು ಉಡುಪಿ ಸೇರಿದಂತೆ ರಾಜ್ಯದ ವಿವಿಧೆಡೆ ಭಾರಿ ಮಳೆ ಸಾಧ್ಯತೆ

Udupilive News

ಪೇಜಾವರ ಶ್ರೀಗಳ ಬಗ್ಗೆ ಲಘುವಾಗಿ ಮಾತನಾಡಿದ್ದು ಹಿಂದೂ ಸಮಾಜಕ್ಕೆ ನೋವು ತಂದಿದೆ; ಸಂಸದ ಕೋಟ ಶ್ರೀನಿವಾಸ ಪೂಜಾರಿ

Udupilive News

ಸೆಪ್ಟಂಬರ್ 14 ರಂದು ಕೇರಳ ಸಮಾಜಂ (ರಿ)ಉಡುಪಿವತಿಯಿಂದ ಒಣಂ ಸಂಭ್ರಮಾಚರಣೆ

Udupilive News

Leave a Comment