ಉಡುಪಿಕುಂದಾಪುರಬೈಂದೂರುಬ್ರಹ್ಮಾವರಹೆಬ್ರಿ

ಪಿಸ್ತೂಲಿನಿಂದ ಶೂಟ್ ಮಾಡಿ ಸಾಯಿಸುವುದಾಗಿ ಬೆದರಿಕೆ ಹಾಕಿ ಹಲ್ಲೆ.ಪ್ರಕರಣ ದಾಖಲು

ಪಿಸ್ತೂಲಿನಿಂದ ಶೂಟ್ ಮಾಡಿ ಸಾಯಿಸುವುದಾಗಿ ಬೆದರಿಕೆ ಹಾಕಿ ಹಲ್ಲೆ ನಡೆಸಿದ ಘಟನೆ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಡ ಗ್ರಾಮದ ಶ್ರೀಕಾಂತ ಎಂಬವರು ಹಡವು ಗ್ರಾಮದ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಹೋಗುವ ಕ್ರಾಸ್ ರಸ್ತೆಯ ಬಳಿ ಪರಿಚಯದ ಅರವಿಂದ, ಚಂದ್ರ ಪಡುಮನೆ, ಸುರೇಶ, ಶಿವ ಕುಮಾರ್, ಮನು ಮತ್ತು ಸುದೇಶ ಅವರ ಜೊತೆಯಲ್ಲಿ ಸಂಜೆ 7.00 ಗಂಟೆ ಸುಮಾರಿಗೆ ಮಾತನಾಡುತ್ತಾ ನಿಂತುಕೊಂಡಿದ್ದ ಸಮಯ ಸ್ಥಳಕ್ಕೆ ಬಂದ ಸಚಿನ್, ಶರತ್, ವಿಶ್ವನಾಥ, ರೋಶನ್ ಫೆರ್ನಾಂಡಿಸ್, ಪ್ರದೀಪ, ಕಾರ್ತಿಕ್, ಪ್ರಕಾಶ್, ಕೀರ್ತಿಕ್, ಗಣೇಶ, ವಿಶಾಲ್, ಗೌತಮ, ರಾಹುಲ್, ಸಂತೋಷ, ಮಹೇಂದ್ರ, ಜಗದೀಶ, ಸಂತೋಷ, ಅಂಕಿತ್, ಸಾರ್ಥಕ್, ಶಿವರಾಜ, ಸಾಧನ್ ಹಾಗೂ ಇತರರು ಬಂದಿದ್ದು, ಈ ಪೈಕಿ ಸಚಿನ್ ಒಂದು ಕೈಯಲ್ಲಿ ಪಿಸ್ತೂಲ್ ಹಾಗೂ ಇನ್ನೊಂದು ಕೈಯಲ್ಲಿ ಮಾರಕಾಯುಧ ಹಿಡಿದುಕೊಂಡಿದ್ದು, ಶರತ್ ಹಾಗೂ ಉಳಿದವರು ಕೂಡಾ ಮಾರಕಾಯುಧಗಳನ್ನು ಹಿಡಿದುಕೊಂಡು ಬೆದರಿಸಿ ಓಡಿಸಿದ್ದಲ್ಲದೆ, ಶಿವಕುಮಾರ್ ಮತ್ತು ಮನು ಅವರ ಮೇಲೆ ಮಾರಕಾಯುಧದಿಂದ ಹೊಡೆದು ಹಲ್ಲೆ ಮಾಡಿದ್ದಾರೆ.

ನಿಮ್ಮನ್ನು ಈಗಲೇ ಶೂಟ್ ಮಾಡಿ ಸಾಯಿಸುವುದಾಗಿ ಪಿಸ್ತೂಲ್‌ನಿಂದ ತಲೆಗೆ ಗುರಿ ಹಿಡಿದು, ಜೀವ ಬೆದರಿಕೆ ಹಾಕಿದ್ದಾರೆ ಎಂದು ಶ್ರೀಕಾಂತ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Related posts

ಬೈಂದೂರಿನಲ್ಲಿ‌ ಕಾಣಿಸಿಕೊಂಡ‌ ಚಡ್ಡಿ ಗ್ಯಾಂಗ್ !

Udupilive News

ದೇಶದಲ್ಲಿಯೇ ಹೆಚ್ಚು ಆದಾಯ ಹೊಂದಿರುವ ರಾಜ್ಯ ಕರ್ನಾಟಕ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Udupilive News

ಯುವ ಬರಹಗಾರ ರಾಮಾಂಜಿ ಯವರಿಂ್ ನಮ್ಮ ಜಾತ್ರೆಯ ಹಿಂದೆ ಮುಂದೆ ಕವನ ವಾಚನ.

Udupilive News

Leave a Comment