ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ನಡೆಯಲಿರುವ ಮೂರು ದಿನಗಳ ಪ್ರಾಚ್ಯ ವಿದ್ಯಾ ಸಮ್ಮೇಳನದ ಉದ್ಘಾಟನೆಗೆ ಬಾಬಾ ರಾಮದೇವ್ ಆಗಮಿಸಿದ್ದಾರೆ.ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಾಬಾ ರಾಮದೇವ್ರನ್ನು ಭವ್ಯವಾಗಿ ಸ್ವಾಗತಿಸಲಾಯಿತು.
ನೆರೆದ ಯೋಗಮಾತೆಯರು ಆರತಿಯನ್ನು ಬೆಳಗಿದರು. ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ, ವೇದಘೋಷದ ನಡುವೆ ಮಾಲಾರ್ಪಣೆ ಮಾಡಿ ಗಣ್ಯರನ್ನು ಸ್ವಾಗತಿಸಿದರು.ಉದ್ಯಮಿ ಶಾಂತೀಶ್ ಶೆಟ್ಟಿ, ರಾಘವೇಂದ್ರ ಭಟ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.ಬಾಬಾ ಶ್ರೀರಾಮ್ ದೇವ್ ಜೊತೆಯಲ್ಲಿ ಬಾಲಕೃಷ್ಣಾಚಾರ್ಯ ಮತ್ತು ಮಾತಾ ಸಾಧ್ವೀ ದೇವಪ್ರಿಯಾ ದೀದೀಜಿ ಇದ್ದರು.
next post