ಉಡುಪಿಕಾಪುಕಾರ್ಕಳಕುಂದಾಪುರದಕ್ಷಿಣ ಕನ್ನಡಪುತ್ತೂರು-ಸುಳ್ಯಬೆಳ್ತಂಗಡಿ-ಬಂಟ್ವಾಳಬೈಂದೂರುಬ್ರಹ್ಮಾವರಮಂಗಳೂರುಮೂಲ್ಕಿ-ಮೂಡುಬಿದ್ರಿಹೆಬ್ರಿ

ಕೊಕ್ಕರ್ಣೆಯಲ್ಲಿ ಸತ್ಯನಾಥ ಸ್ಟೋರ್ಸ್’ನ ನೂತನ ಶಾಖೆ ಉದ್ಘಾಟನೆ

ಉಡುಪಿ: ಬ್ರಹ್ಮಾವರ, ತೀರ್ಥಹಳ್ಳಿ, ಕೊಪ್ಪದಲ್ಲಿ ವಸ್ತ್ರ ವೈವಿಧ್ಯಗಳ ಮಾರಾಟ ಮತ್ತು ಸೇವೆಗೆ ಹೆಸರುವಾಸಿಯಾದ 75 ವರ್ಷಗಳಿಂದ ಗ್ರಾಹಕರ ಮನೆಮಾತಾಗಿರುವ ‘ಸತ್ಯನಾಥ ಸ್ಟೋರ್ಸ್’ನ ನೂತನ ಶಾಖೆ “ಶ್ರೀರಾಮ್ ಟೆಕ್ಸ್‌ ಟೈಲ್ಸ್” ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಮುಖ್ಯರಸ್ತೆಯ ಓಂಶ್ರೀ ಸಂಕೀರ್ಣದಲ್ಲಿ ಇಂದು ಉದ್ಘಾಟನೆಗೊಂಡಿತು. ಗರಿಕೆಮಠ ಶ್ರೀ ಅರ್ಕ ಮಹಾಗಣಪತಿ ದೇವಸ್ಥಾನದ ವೇದಮೂರ್ತಿ ಜಿ. ರಾಮಪ್ರಸಾದ ಅಡಿಗ ಹಾಗೂ ಕೋರ್ಚಿಬೆಟ್ಟು ಶ್ರೀ ಮಹಾಗಣಪತಿ ದೇವಸ್ಥಾನದ ಅರ್ಚಕ ಕೆ. ಶಿವರಾಮ ಅಡಿಗ ಅವರು ದೀಪ ಪ್ರಜ್ವಲಿಸಿ ನೂತನ ವಸ್ತ್ರ ಮಳಿಗೆಯನ್ನು ಉದ್ಘಾಟಿಸಿದರು‌.

ವೇದಮೂರ್ತಿ ಜಿ. ರಾಮಪ್ರಸಾದ ಅಡಿಗ ಮಾತನಾಡಿ, ಗ್ರಾಹಕರಿಗೆ ಸಂಸ್ಥೆಯ ಮೇಲೆ ಸಂತೃಪ್ತಿ ಹಾಗೂ ವಿಶ್ವಾಸ ಮೂಡಬೇಕು. ಈ ಎರಡನ್ನು ಸತ್ಯನಾಥ ಸ್ಟೋರ್ಸ್ ನವರು 75 ವರ್ಷಗಳಿಂದ ಮುಂದುವರಿಸಿಕೊಂಡು ಬಂದಿದ್ದಾರೆ. ಕೊಕ್ಕರ್ಣೆ ಎಂಬ ಪ್ರದೇಶವು ಸುತ್ತಮುತ್ತ ಹಳ್ಳಿಗಳನ್ನು ಒಳಗೊಂಡಿರುವ ಬೆಳೆಯುತ್ತಿರುವ ಊರಾಗಿದ್ದು, ಇಲ್ಲಿಗೆ ಸತ್ಯನಾಥ ಸ್ಟೋರ್ಸ್ ನಂತಹ ಸಂಸ್ಥೆಯ ಅಗತ್ಯವಿತ್ತು. ನವರಾತ್ರಿಯ ಶುಭಸಂದರ್ಭದಲ್ಲಿ ಸಂಸ್ಥೆಯ ನೂತನ ವಸ್ತ್ರ ಮಳಿಗೆ ಆರಂಭಗೊಂಡಿದೆ. ಈ ಊರಿನವರಿಗೂ ಸಂಸ್ಥೆಯ ಬಗ್ಗೆ ವಿಶ್ವಾಸ ಹಾಗೂ ಸಂತೃಪ್ತಿ ತರಲಿ. ಸಂಸ್ಥೆ ನಂಬಿರುವ ಕಾರ್ಮಿಕ ವರ್ಗದವರ ಅಭಿವೃದ್ಧಿಯಾಗಲಿ. ಸಂಸ್ಥೆಯ ಮಾಲೀಕರಾದ ಸತ್ಯನಾಥ ಅವರಿಗೂ ಅರ್ಕ ಮಹಾಗಣಪತಿ ದೇವರ ಸಂಪೂರ್ಣ ಅನುಗ್ರಹ ಸಿಗಲಿ ಎಂದು ಆಶೀರ್ವದಿಸಿದರು.

ಸಂಸ್ಥೆಯ ಪಾಲುದಾರರಾದ ಬಿ. ಸತ್ಯನಾಥ ಪುರುಷೋತ್ತಮ ಪೈ, ಬಿ. ಗಿರಿಧರ ಸತ್ಯನಾಥ ಪೈ, ಸ್ಮಿತಾ ಆರ್. ನಾಯಕ್, ಓಂಶ್ರೀ ರಾಘವೇಂದ್ರ ನಾಯಕ್ ಉಪಸ್ಥಿತರಿದ್ದರು.

ವೈವಿಧ್ಯಮಯ ವಸ್ತ್ರಗಳ ಅಪಾರ ಸಂಗ್ರಹ:

ವೈವಿಧ್ಯಮಯ ಅಪಾರ ಸಂಗ್ರಹದ ಪರಿಪೂರ್ಣ ಮದುವೆ ಜವಳಿ ಮಳಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಸಂಸ್ಥೆಯ ಎಲ್ಲ ಶಾಖೆಗಳಲ್ಲಿ ಕಾಂಚೀವರಂ, ಅರಣಿ, ಧರ್ಮಾವರಂ, ಸತ್ಯಮಂಗಳ, ಹಿಂದೂಪುರ, ಸೇಲಂ, ಬನಾರಸ್, ಕೋಲ್ಕತಾ, ಸೂರತ್, ಮಧುಬನಿ, ಚಾಪಾ, ಮೀನಾ, ಖಾತಾ, ಕೋಟಾ, ಪೋಚಂಪಲ್ಲಿ ಇಕ್ಕತ್, ಪೈತನಿ, ನಾರಾಯಣಪೇಟ್ ಮುಂತಾದ ರೇಷ್ಮೆ ಸೀರೆಗಳ ಬೃಹತ್ ಸಂಗ್ರಹವಿದೆ. ಮಹಿಳೆಯರ ಕುರ್ತಿಸ್, ಬೈಡಲ್ ಲೆಹೆಂಗ, ಚೂಡಿದಾರ, ಗೌನ್ಸ್, ಡ್ರೆಸ್ ಮೆಟೀರಿಯಲ್ಸ್, ಪುರುಷರ ಶರ್ವಾನಿ, ಕುರ್ತಾ, ಬ್ರಾಂಡೆಡ್ ಶರ್ಟ್, ಟಿ-ಶರ್ಟ್, ಜೀನ್ಸ್ ಪ್ಯಾಂಟ್, ಮಕ್ಕಳ ವೆಸ್ಟರ್ನ್ ಡ್ರೆಸ್, ಫ್ರಾಕ್, ಚೂಡಿದಾರ, ಗೌನ್ಸ್, ಹ್ಯಾಂಡ್ ಲೂಮ್ಸ್, ಬೆಡ್‌ ಶೀಟ್, ಬ್ಲಾಂಕೆಟ್, ಧೋತೀಸ್, ಶಲ್ಯ ಇತ್ಯಾದಿ ಬಟ್ಟೆಗಳ ಬೃಹತ್ ಸಂಗ್ರಹವಿದೆ. ಬಟ್ಟೆಗಳ ಆಯ್ಕೆಗೆ ಗ್ರಾಹಕರಿಗೆ ವಿಪುಲ ಅವಕಾಶ ಕಲ್ಪಿಸಲಾಗಿದೆ.

Related posts

ಕಾಪು ಕಾಲೇಜು ವಿದ್ಯಾರ್ಥಿನಿ ನಾಪತ್ತೆ

Udupilive News

ಆಲ್ವಿನ್ ಡಿಸೋಜಾ ಹಲ್ಲೆಕೋರರನ್ನು ಶೀಘ್ರ ಬಂಧಿಸಿ – ಕಥೊಲಿಕ್ ಸಭಾ ಉಡುಪಿ ಪ್ರದೇಶ ಆಗ್ರಹ

Udupilive News

ಗೌರಿ ಲಂಕೇಶ್ ಹತ್ಯೆಯ ಆರೋಪಿಗಳಿಗೆ ಸನ್ಮಾನ ಪ್ರಕರಣ :ಪ್ರತಿಗಾಮಿ ಶಕ್ತಿಗಳು ರಾಷ್ಟ್ರ ಭಕ್ತಿಯ ಹೆಸರಿನಲ್ಲಿ ರಾಷ್ಟ್ರದ್ರೋಹದ ಕೆಲಸ ಮಾಡುತ್ತಿವೆ – ಇದ್ರೀಸ್ ಹೂಡೆ

Udupilive News

Leave a Comment