ಉಡುಪಿಕಾಪುಕಾರ್ಕಳಕುಂದಾಪುರಬೈಂದೂರು

ರಾಜ್ಯದ ಮುಖ್ಯಮಂತ್ರಿಗಳ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದು ಬೆಂಕಿ ಹಚ್ಚಿದ ಬಿಜೆಪಿಗರ ವರ್ತನೆ ಖಂಡನೀಯ. ಪ್ರಸಾದ್ ರಾಜ್ ಕಾಂಚನ್ ಆಕ್ರೋಶ

 

ರಾಜ್ಯದ ಮುಖ್ಯಮಂತ್ರಿಗಳ ಪ್ರತಿಕೃತಿಗೆ,ಚಪ್ಪಲಿಯಿಂದ ಹೊಡೆದು ಅವಮಾನಿಸುವ ಬಿಜೆಪಿಗರ ವರ್ತನೆ ಖಂಡನೀಯ ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯವನ್ನು ಆಳುತ್ತಿರುವ ಮುಖ್ಯಮಂತ್ರಿ ಒಂದು ಗೌರವದ ಹುದ್ದೆಯಲ್ಲಿದ್ದಾಗ ಅವರ ಪ್ರತಿಕೃತಿ ರಚಿಸಿ ಚಪ್ಪಲಿಯಿಂದ ಹೊಡೆದು ಅವಮಾನಿಸುವುದು ಸರಿಯಾದ ಕ್ರಮವಲ್ಲ. ಸ್ಥಳದಲ್ಲಿ ಉಪಸ್ಥಿತರಿದ್ದ ಶಾಸಕರು ಇದನ್ನು ಕಂಡು ಕುರುಡರಂತೆ ವರ್ತಿಸುವ ಬದಲು ತಡೆಯುವ ಕೆಲಸ ಮಾಡಬೇಕಾಗಿತ್ತು ಅದನ್ನು ಬಿಟ್ಟು ತನ್ನ ಕಾರ್ಯಕರ್ತರು ಮಾಡಿದ್ದೆ ಸರಿ ಎಂಬಂತೆ ವರ್ತಿಸಿರುವುದು ಸರಿಯಾದ ವರ್ತನೆಯಲ್ಲ.

ಬಿಜೆಪಿಗರ ಬೆಂಕಿ ಹಚ್ಚುವ ಸಂಸ್ಕೃತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದರ ವಿರುದ್ದ ಕಾಂಗ್ರೆಸ್ ಪಕ್ಷ ಸೂಕ್ತ ಉತ್ತರ ನೀಡಲು ಸಿದ್ದವಿದೆ.

ಕಾನೂನಿನ ಪ್ರಕಾರ ಒರ್ವ ಮುಖ್ಯಮಂತ್ರಿಯನ್ನು ಅವಮಾನಿಸಿರುವುದು ಪಕ್ಷದ ಕಾರ್ಯಕರ್ತರಿಗೆ ನೋವು ತಂದಿದ್ದು ಅದಕ್ಕಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಅದರಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ . ಇದನ್ನು ತಿರುಚಿ ಬಿಜೆಪಿಗರು ಇದಕ್ಕೆ ಬೇರೆಯೇ ಅರ್ಥ ನೀಡುತ್ತಿದ್ದಾರೆ ಇದನ್ನು ಜಿಲ್ಲೆಯ ಜನ ಅರ್ಥ ಮಾಡಿಕೊಂಡಿದ್ದಾರೆ.

ಬಿಜೆಪಿಗರು ಇನ್ನಾದರೂ ತಮ್ಮ ಪುಂಡಾಟಗಳನ್ನು ನಿಲ್ಲಿಸಿ ಜನರ ಆಶೋತ್ತರಗಳಿಗೆ ಸ್ಪಂದಿಸಿ ಅಭಿವೃದ್ಧಿಯತ್ತ ಗಮನ ಹರಿಸಲಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಉಡುಪಿ ಪತ್ರಕರ್ತರ ‘ರಜತ ಕ್ರೀಡಾ ಸಂಭ್ರಮ’ದ ಜೆರ್ಸಿ ಅನಾವರಣ

Udupilive News

ಕೊಡಂಕೂರು :ಕೀಳು ಮಟ್ಟದ ರಾಜಕೀಯ ,ಸಾರ್ವಜನಿಕರಿಗಾಗಿ ನಿರ್ಮಿಸಿದ್ದ ಬಸ್ ತಂಗುದಾಣವನ್ನೇ ಕೆಡವಿದ ನಗರಸಭೆ.

Udupilive News

ಉಡುಪಿಯ ಟೈಮ್ಸ್ ಸ್ಕ್ವೇರ್ ಮಾಲ್ ನಲ್ಲಿ ‘ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್’ ಹೋಟೆಲ್ ಶುಭಾರಂಭ

Udupilive News

Leave a Comment