ಉಡುಪಿ

ಉಡುಪಿ: ರೈಲ್ವೇ ನಿಲ್ದಾಣಕ್ಕೆ ವ್ಹೀಲ್ ಚೇರ್ ಗಳ ಕೊಡುಗೆ

ಉಡುಪಿ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಮತ್ತು ಉಡುಪಿ ರೈಲ್ವೆ ಯಾತ್ರಿ ಸಂಘ ಇವರ ಜಂಟಿ ಆಶ್ರಯದಲ್ಲಿ ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ ರೈಲ್ವೆ ನಿಲ್ದಾಣದಲ್ಲಿ ಅಶಕ್ತ ಪ್ರಯಾಣಿಕರ ಸೌಲಭ್ಯತೆಗಾಗಿ ವೀಲ್ ಚಯರ್ ಗಳನ್ನು ಕೊಡುಗೆಯಾಗಿ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಸೊಸೈಟಿಯ ಅಧ್ಯಕ್ಷರಾದ ಶ್ರೀ ಅರುಣ್ ಕುಮಾರ್ ಶೆಟ್ಟಿ ಅವರು ವೀಲ್ ಚಯರ್ ಗಳನ್ನು ಸಾಂಕೇತಿಕವಾಗಿ ಸ್ಟೇಷನ್ ಮಾಸ್ಟರ್ ನಾಗರಾಜ್ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು. ಸೊಸೈಟಿಯ ಮಹಾ ಪ್ರಬಂಧಕ ರಾಜೇಶ್ ಹೆಗ್ದೆ, ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷರಾದ ಧೀರಜ್ ಶಾಂತಿ, ಉಪಾಧ್ಯಕ್ಷರಾದ ಮಧುಸೂದನ್ ಹೇರೂರು, ನಿರ್ದೇಶಕರುಗಳಾದ ತೊನ್ಸೆ ಶ್ರೀನಿವಾಸ್ ಶೆಟ್ಟಿ, ಜಾನ್ ರೆಬೆಲ್ಲೊ, ಜನಾರ್ಧನ್ ಕೋಟ್ಯಾನ್, ರವಿ ಪೂಜಾರಿ ಹಿರಿಯಡ್ಕ, ರವೀಶ್ ಕೋಟ್ಯಾನ್, ರೈಲ್ವೆ ಕಮರ್ಷಿಯಲ್ ಇನ್ ಚಾರ್ಜ್ ಸತ್ಯನಾರಾಯಣ ಭಟ್, ಮತ್ತಿತರರು ಹಾಜರಿದ್ದರು. ಮಂಜುನಾಥ್ ಮಣಿಪಾಲ್ ಕಾರ್ಯಕ್ರಮವನ್ನು ಸಂಯೋಜಿಸಿದರು.

Related posts

ನ.4ರಿಂದ 10ರವರೆಗೆ ಚಿಕ್ಕಮಗಳೂರಿನ ದತ್ತ ಪೀಠದಲ್ಲಿ ದತ್ತಮಾಲಾ ಅಭಿಯಾನ; ಉಡುಪಿಯಿಂದ 500ಕ್ಕಿಂತಲೂ ಹೆಚ್ಚು ಕಾರ್ಯಕರ್ತರು ಭಾಗಿ

Udupilive News

ಕೇಂದ್ರದ ಬಿಜೆಪಿ ಸರ್ಕಾರದಲ್ಲಿ ದೇಶದ ಭದ್ರತೆ ಅಪಾಯದಲ್ಲಿ ಪ್ರಸಾದ್ ರಾಜ್ ಕಾಂಚನ್

Udupilive News

ಜೂ.23ರಂದು ದ.ಕ ಮತ್ತು ಉಡುಪಿ ಜಿಲ್ಲೆಯ 399 ಸ್ಥಳಗಳಲ್ಲಿ ಏಕಕಾಲದಲ್ಲಿ ಬಿಜೆಪಿ ಧರಣಿ.

Udupilive News

Leave a Comment