ಉಡುಪಿ

ಅಮರವೀರ ಗೀತ ಗಾಯನ ಸ್ಪರ್ಧೆ-ಬಹುಮಾನ ವಿತರಣೆ, ಸನ್ಮಾನ

ಉಡಪಿ: ಶ್ರೀ ದುರ್ಗಾ ಮ್ಯೂಸಿಕ್ ಮೀಟ್ ಮಂಚಿ ಮಣಿಪಾಲ ಹಾಗೂ ಲಯನ್ಸ್ ಕ್ಲಬ್ ಮಣಿಪಾಲ ವ್ಯಾಲಿ, ಲಯನ್ಸ್ ಕ್ಲಬ್ ಸಂತೆಕಟ್ಟೆ ಲಯನ್ಸ್ ಕ್ಲಬ್ ಕಲ್ಯಾಣ್ಪುರ, ಯುವಜನ ಸೇವಾ ಸಂಘ ದುಗ್ಲಿ ಪದವು ಮಂಚಿ ಇವರ ಆಶ್ರಯದಲ್ಲಿ 79ನೇ ಸ್ವಾತಂತ್ರ್ಯ ಪ್ರಯುಕ್ತ ಅಮರವೀರ ಗೀತ ಗಾಯನ ಸ್ಪರ್ಧೆ ಏರ್ಪಡಿಸಿ, ಬಹುಮಾನ ವಿತರಣಾ ಕಾರ್ಯಕ್ರಮವು ಯುವ ಸೇವಾ ಸಂಘ ದುಗ್ಲಿ ಪದವು ಮಂಚಿ ಇದರ ಸಭಾಂಗಣದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ದುರ್ಗಾ ಮ್ಯೂಸಿಕ್ ಮಿಟ್ ನ ಮುಖ್ಯಸ್ಥರು ಶ್ರೀಮತಿ ತೇಜಸ್ವಿನಿ ಅನಿಲ್ ರಾಜ್ ವಹಿಸಿದ್ದರು

ಕಾರ್ಯಕ್ರಮದ ಉದ್ಘಾಟನೆಯನ್ನು ಯುವಜನ ಸೇವಾ ಸಂಘ ಶ್ರೀ ದಿನೇಶ್ ಶೆಟ್ಟಿ, ಬಹುಮಾನ ವಿತರಣೆಯನ್ನು ಶ್ರೀ ಸತೀಶ್ ಕುಮಾರ್ ಮಂಚಿ, ಮುಖ್ಯ ಅತಿಥಿಗಳಾಗಿ ನಗರಸಭಾ ಸದಸ್ಯರಾದ ಹಾಗೂ ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಶ್ರೀ ರಮೇಶ್ ಕಾಂಚನ್, ಕಲ್ಯಾಣ್ಪುರ ಲಯನ್ಸ್ ಅಧ್ಯಕ್ಷರಾದ ರಿಚರ್ಡ್ ಕ್ರಾಸ್ಟೋ, ಸಂತೆಕಟ್ಟೆ ಲಯನ್ಸ್ ಅಧ್ಯಕ್ಷರಾದ ಜ್ಯೋತಿ ಶೆಟ್, ಮಣಿಪಾಲ ವ್ಯಾಲಿ ಇದರ ಸದಸ್ಯರಾದ ಲಯನ್ ಸಾಧನ ಕಿಣಿ, ಲಯನ್ಸ್ ಕ್ಲಬ್ ಮಣಿಪಾಲ ಯುಕ್ತಿ ಸದಸ್ಯರಾದ ಲಯನ್ ವಿದ್ಯಾದರಿ ಹಾಗೂ ಶ್ರೀ ವಿಕ್ರಂ ಮಂಚಿ ಇವರು ಉಪಸ್ಥಿತರಿದ್ದರು, ಕಾರ್ಯಕ್ರಮದ ಸಂಯೋಜಕರಾದ ಲಯನ್ ನಂದಕಿಶೋರ್ ಇವರಿಂದ ಸ್ವಾಗತ ಮತ್ತು ಪ್ರಾಸ್ತಾವಿಕ, ವಂದನಾರ್ಪಣೆ ಶ್ರೀ ಅನಿಲ್ ರಾಜ್, ಕಾರ್ಯಕ್ರಮದ ನಿರೂಪಣೆ ಶ್ರೀಮತಿ ಶ್ರೀಲತಾ ಹಾಗೂ ಡಾಕ್ಟರ್ ಸಚಿನ್ ಸಾಲಿಯಾನ್.

ಕಾರ್ಯಕ್ರಮದಲ್ಲಿ 6 ರಿಂದ 12 ವರ್ಷದ ವಿಭಾಗದಲ್ಲಿ….1)ಮೈಥಿಲಿ ಆಚಾರ್ಯ 2)ವೈಷ್ಣವಿ 3)ಅಶ್ವಿಕ
12 ರಿಂದ 18 ವರ್ಷದ ವಿಭಾಗದಲ್ಲಿ….. 1)ತುಷಾರ ಶಂಕರ್ 2)ನಿರಂಜನ್ 3)ವಿದ್ಯಾಶ್ರೀ
ಹಾಗೆಯೇ ಸಮಾಧಾನಕರ ಬಹುಮಾನಗಳನ್ನು ಪಡೆದುಕೊಂಡವರು
1)ಸೆಲ್ವಿನ್ ಡಿಸೋಜಾ 2)ಕಶ್ವಿ ರಾವ್ 3)ಶಮಿಕ ಎಸ್ ಪೂಜಾರಿ 4)ಪಿ ಪ್ರಣವ್, 5)ಸುಜನಾ
ಹಾಗೆ ರಂಗಸೌರಭ ಬಿರುದಾಂಕಿತ ರಂಗಭೂಮಿ ಕಲಾವಿದ ಶ್ರೀ ವಿಕ್ರಮ್ ಮಂಚಿ ಇವರಿಗೆ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.

Related posts

ಕಾಂಗ್ರೆಸ್ ಮತ ಬ್ಯಾಂಕಿಗಾಗಿ ಬಾಂಗ್ಲಾ ವಲಸಿಗರಿಗೆ ಅಧಾರ್ ಕಾರ್ಡ್‌ ಸಿಗುವಂತೆ ಮಾಡಿದ್ದಾರೆ.ಶಾಸಕ ಯಶ್ ಪಾಲ್ ಸುವರ್ಣ

Udupilive News

ಆಲ್ವಿನ್ ಡಿಸೋಜಾ ಹಲ್ಲೆಕೋರರನ್ನು ಶೀಘ್ರ ಬಂಧಿಸಿ – ಕಥೊಲಿಕ್ ಸಭಾ ಉಡುಪಿ ಪ್ರದೇಶ ಆಗ್ರಹ

Udupilive News

ಮಂಗಳೂರು: ಕಾರು ಅಫಘಾತ ಫೋಟೊಗ್ರಾಫರ್ ಸಾವು

Udupilive News

Leave a Comment