ಉಡುಪಿ

ದೇಶ ವಿಭಜನೆಯ ಕರಾಳ ನೆನಪು’ : ಜಿಲ್ಲಾ ಬಿಜೆಪಿಯಿಂದ ‘ವಿಭಜನ ವಿಭೀಷಣ ಸ್ಮೃತಿ ದಿವಸ’ ಆಚರಣೆ

ಉಡುಪಿ: ’79ನೇ ಸ್ವಾತಂತ್ರೋತ್ಸವ’ದ ‘ಹರ್ ಘರ್ ತಿರಂಗಾ’ ಅಭಿಯಾನದ ಸಂದರ್ಭದಲ್ಲಿ ದೇಶ ವಿಭಜನೆಯ ಕರಾಳ ಇತಿಹಾಸವನ್ನು ನೆನಪಿಸುವ ‘ವಿಭಜನ ವಿಭೀಷಣ್ ಸ್ಮೃತಿ ದಿವಸ್’ ಪ್ರಯುಕ್ತ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಪ್ರಕೋಷ್ಠಗಳ ಸಹಯೋಗದಲ್ಲಿ ಕಡಿಯಾಳಿಯ ಹೋಟೆಲ್ ಓಷಿಯನ್ ಪರ್ಲ್ ಬಳಿಯಿಂದ ಜಿಲ್ಲಾ ಬಿಜೆಪಿ ಕಛೇರಿಯ ವರೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರ ನೇತೃತ್ವದಲ್ಲಿ ‘ಮೌನ ಮೆರವಣಿಗೆ’ ನಡೆಯಿತು.

ಬಳಿಕ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕಾರ್ಕಳದ ಖ್ಯಾತ ನ್ಯಾಯವಾದಿ ಸುವ್ಹೃತ್ ಕುಮಾರ್ ಅವರಿಂದ ‘ದೇಶ ವಿಭಜನೆಯ ಕರಾಳ ಇತಿಹಾಸ’ದ ಕುರಿತು ವಿಸ್ತ್ರತ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ದೇಶ ವಿಭಜನೆಯ ಕರಾಳತೆಯಲ್ಲಿ ಬೆಂದು ಮಡಿದ ಲಕ್ಷಾಂತರ ಚೇತನಗಳ ಗೌರವಾರ್ಥವಾಗಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ಜಿಲ್ಲಾ ಪ್ರಕೋಷ್ಠಗಳ ಸಹ ಸಂಯೋಜಕ ಶಂಕರ ಅಂಕದಕಟ್ಟೆ ಸಹಿತ ಪಕ್ಷದ ರಾಜ್ಯ, ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲ ಸಹಿತ ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ದಿಲೇಶ್ ಶೆಟ್ಟಿ ಸ್ವಾಗತಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ನಗರ ಪ್ರಕೋಷ್ಠ ಸಂಚಾಲಕ ಮಧುಕರ ಮುದ್ರಾಡಿ ವಂದಿಸಿದರು.

Related posts

ಬಾಗಿಲ ಬಳಿಯಿಟ್ಟಿದ್ದ ಕೀ ಬಳಸಿ ಕಳ್ಳತನ .ಅರೋಪಿ ಬಂಧನ.

Udupilive News

ಮಗುವಿನ ಮೇಲೆ ದೌರ್ಜನ್ಯ ಎಸಗಿದ ಅರೋಪಿಯಿಂದ ಪೊಲೀಸರ ಮೇಲೆ ಅಟ್ಯಾಕ್

Udupilive News

ಉಡುಪಿ: ಟೀಮ್ ಕರ್ಣದಿಂದ “ಕರ್ಣ ಮಹಾಸಂಗಮ” ಕಾರ್ಯಕ್ರಮ

Udupilive News

Leave a Comment