ಉಡುಪಿ

ಶ್ರೀ ಕೃಷ್ಣನ ಕೃಪೆ ಕಾಂಗ್ರೆಸ್ ಪಕ್ಷಕ್ಕಿದೆ.   ಶಾಸಕರ ವರ್ತನೆ ತಿದ್ದಿಕೊಳ್ಳುವಂತೆ ಶ್ರೀ ಕೃಷ್ಣ  ಪರಮಾತ್ಮ ಅನು ಗ್ರಹಿಸಲಿ – ಪ್ರಸಾದ್ ರಾಜ್ ಕಾಂಚನ್

ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೃಷ್ಣ ಮಠಕ್ಕೆ ಭೇಟಿ ನೀಡಿ ನಿಮ್ಮ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಿ ಮತ್ತು ಪಕ್ಷದಲ್ಲಿ ನಡೆದಿರುವ ರಾಜಕೀಯ ವಿಚಾರದ ಬಗ್ಗೆ ಹೇಳಿರುವ ಠೀಕೆಗಳಿಗೆ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಕಟುವಾಗಿ ಟೀಕಿಸಿದ್ದಾರೆ.

ರಾಜ್ಯ ಬಿ.ಜೆ.ಪಿ. ಯಲ್ಲಿ ಈಗಲೇ 3 ತುಂಡು ಆಗಿದ್ದು, ಅದನ್ನು ಸರಿಪಡಿಸುವುದನ್ನು ಬಿಟ್ಟು ತನ್ನ ರಾಜಕೀಯ ಬೇಳೆ ಬೇಯಿಸಲು ಕೋಮು ಗಲಭೆ ಹೂಡುವ ಪ್ರಯತ್ನ ಮಾಡುತ್ತಾರೆ ಎಂದು ಆರೋಪಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 136 ಸೀಟು ಗಳಿಸಿ, ಕಳೆದ ಉಪಚುನಾವಣೆಯಲ್ಲಿ ಕೂಡ 3 ಕ್ಕೆ 3 ಸೀಟನ್ನು ಗಳಿಸಿ ಸಮಸ್ತ ಕರ್ನಾಟಕದ ಜನತೆಗೆ ಮಾದರಿ ರೀತಿಯಲ್ಲಿ ಸರಕಾರ ಆಡಳಿತ ಕೊಡುತ್ತಿರುವುದರಿಂದ ಶ್ರೀ ಕೃಷ್ಣನ ಕೃಪೆ ಸಿದ್ಧರಾಮಯ್ಯನವರ ಸರಕಾರಕ್ಕೆ ಒಲಿದಿದೆ ಎಂದರು.

ಜಿಲ್ಲೆಯಲ್ಲಿ ಕೋಮು ದ್ವೇಷವನ್ನು ಹರಡಿಸಲ ಚಡ್ಯಂತ್ರ ರಚಿಸಿದ್ದ ,ಬ್ರಹ್ಮವರದ ದನದ ತಲೆಯನ್ನು ಬಿಸಾಡಿದ ಪ್ರಕರಣ ಕ್ಕೆ ಸಂಭಂಧಿಸಿ , ಅರೋಪಿಗಳನ್ನು ಒಂದೇ ದಿನದಲ್ಲಿ ಬಂಧಿಸುವುದರ ಮೂಲಕ , ಹಂತಂಕರಿಗೆ ಕಾನೂನು ಪಾಠ ಕಲಿಸುವುದರಲ್ಲಿ ಸರ್ಕಾರ ಬದ್ಧರಾಗಿದ್ದಾರೆ ಎನ್ನವುದು ಸಾಬೀತಾಗಿದೆ.

ಜಿಲ್ಲೆಯಲ್ಲಿ ಕೋಮು ಪ್ರಚೋದನೆ ಭಾಷಣ ಮಾಡುವವರ ವಿರುದ್ಧ ಪೋಲೀಸ್ ಇಲಾಖೆಯಲ್ಲಿ ಪ್ರತ್ಯೇಕವಾಗಿ ಕೋಮು ನಿಗ್ರಹ ದಳವನ್ನು ಸ್ಥಾಪಿಸುವುದರಿಂದ ಕೋಮುವಾದಿ ಭಾಷಣಕ್ಕೆ ಕಡಿವಾಣ ಹಾಕಿದ್ದಕ್ಕೆ ಶಾಸಕನಿಗೆ ತನ್ನ ಬೇಳೆ ಬೇಯಿಸಲು ಬೇರೆ ವಿಚಾರ ಸಿಗದಂತಾಗಿದೆ. ಕಾಂಗ್ರೆಸ್ ಪಕ್ಷದ ಆಡಳಿತಕ್ಕೆ ನಿಜವಾಗಿಯೂ ಉಡುಪಿ ಶ್ರೀ ಕೃಷ್ಣನ ಕೃಪೆ ಇರುವುದು ಸಂತೋಷದ ವಿಷಯ.

ಪ್ರಸ್ತುತ ಶಾಸಕನ ವರ್ತನೆ ತಿದ್ದುವಂತೆ ಉಡುಪಿ ಶ್ರೀ ಕೃಷ್ಣನು ಆಶೀರ್ವಾದಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

Related posts

ಮಣಿಪಾಲ ಆರೋಗ್ಯ ಕಾರ್ಡ್‌ನ ರಜತ ಮಹೋತ್ಸವ ವರ್ಷ ,ಮಣಿಪಾಲ ಆರೋಗ್ಯ ಕಾರ್ಡ್ 2025 ರ  ನೋಂದಣಿ ಪ್ರಾರಂಭ

Udupilive News

ಧರ್ಮಸ್ಥಳ ಪ್ರಕರಣ: ಎಸ್ ಐಟಿ ತನಿಖೆಯಿಂದ ಸತ್ಯಾಸತ್ಯತೆ ಬೆಳಕಿಗೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Udupilive News

ಪುಣ್ಯಭೂಮಿ ಧರ್ಮಸ್ಥಳವನ್ನು ಅಪವಿತ್ರಗೊಳಿಸುವ ಯತ್ನವೇಕೇ…!!??ಶ್ರೀನಿಧಿ ಹೆಗ್ಡೆ

Udupilive News

Leave a Comment