ಉಡುಪಿ: ಕಳೆದ ಹಲವು ದಿನಗಳಿಂದ ಶಾಲಾ ವಾಹನಗಳು ಅಜಾಗರುಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸುತ್ರಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವಿಶೇಷ ಕಾರ್ಯಚರಣೆಗೆ ಇಳಿದಿತ್ತು . ವಿಶೇಷ ತಪಾಷಣಾ ಡ್ರೈವ್ ಹೆಸರಲ್ಲಿ ಕಾರ್ಯಚರಣೆಗೆ ಇಳಿದ ಪೊಲೀಸ್ ತಂಡ , ಜಿಲ್ಲೆಯ ಎಲ್ಲಾ ಠಾಣಾ ವ್ಯಾಪಿಯಲ್ಲಿ ಶಾಲಾ ವಾಹನಗಳನ್ನು ಪೊಲೀಸರ ತಾಪಸಣೆ ನಡೆಸಿದ್ದಾರೆ.ಈ ವಿಶೇಷ ತಪಾಷಣಾ ಡ್ರೈವ್‌ನಲ್ಲಿ ಸುಮಾರು 930 ವಾಹನಗಳನ್ನು ತಪಾಸಣೆ ನಡೆಲಾಗಿದ್ದು. ಒಟ್ಟು 282 ಪ್ರಕರಣಗಳನ್ನು ದಾಖಲಿಸಿ ರೂ. 1,58,000/- ಫೈನ್ ವಿದಿಸಲಾಗಿರುತ್ತದೆ.ಇದರಲ್ಲಿ ಪಾನಮತ್ತ ಚಾಲನೆ ಬಗ್ಗೆ 1, ಸರಿಯಾದ ದಾಖಲೆಗಳನ್ನು ಹೊಂದದೇ ಇರುವ ಬಗ್ಗೆ 39, ಓವರ್ ಲೋಡ್ ಹೊಂದಿರುವ ಬಗ್ಗೆ 48 ಹಾಗೂ 194 ಇತರ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಈ ವಿಶೇಷ ತಪಾಷಣಾ ಡ್ರೈವ್ ನಲ್ಲಿ 5 ಪೊಲೀಸ್ ನಿರೀಕ್ಷಕರು, 30 ಪೊಲೀಸ್ ಉಪನಿರೀಕ್ಷಕರು ಹಾಗೂ ಸಿಬ್ಬಂಧಿಗಳು ಭಾಗವಹಿಸಿರುತ್ತಾರೆ.
ಈ ಬಗ್ಗೆ ಸಂಬಂಧಿತ ಶಾಲಾ ಆಡಳಿತ ಮಂಡಳಿಗಳಿಗೆ ಶಾಲೆಯ ಎಲ್ಲಾ ವಾಹನಗಳ ದಾಖಲಾತಿ, ವಾಹನದ ಮಿತಿಗನುಗುಣವಾಗ ಮಕ್ಕಳ ಸಂಖ್ಯೆ ಹಾಗೂ ಇತರೇ ಸುರಕ್ಷತಾ ಕ್ರಮಗಳನ್ನು ಒಂದು ವಾರದ ಒಳಗೆ ಅಳವಡಿಸಿಕೊಳ್ಳುವಂತೆ ಹಾಗೂ ಈ ಎಲ್ಲಾ ಸೌಲಭ್ಯ ಹಾಗೂ ದಾಖಲಾತಿಗಳನ್ನು ಒಂದು ವಾರದ ಓಳಗೆ ಸರಿಪಡಿಸಿಕೊಳ್ಳದೇ ಇದ್ದಲ್ಲಿ ಸಬಂಧಿತ ಶಾಲಾ ವಾಹನಗಳನ್ನು ಸೀಜ್ ಮಾಡುವ ಬಗ್ಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.