ಉಡುಪಿಕೊಡಂಕೂರು :ಕೀಳು ಮಟ್ಟದ ರಾಜಕೀಯ ,ಸಾರ್ವಜನಿಕರಿಗಾಗಿ ನಿರ್ಮಿಸಿದ್ದ ಬಸ್ ತಂಗುದಾಣವನ್ನೇ ಕೆಡವಿದ ನಗರಸಭೆ.\nಉಡುಪಿ: ಕೀಳು ಮಟ್ಟದ ರಾಜಕೀಯಕ್ಕೆ ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಾಣ ಮಾಡಲಾಗಿದ್ದ ಬಸ್ ತಂಗುದಾಣವನ್ನು ನಗರಸಭೆ ಕೆಡವಿಹಾಕಿದೆ.ನಗರಸಭೆ ಅನುಮತಿಯ ಇಲ್ಲದೇ ಬಸ್ಸು ತಂಗುದಾಣ ನಿರ್ಮಿಸಲಾಗಿದೆ ಎನ್ನುವ ಕಾರಣಕ್ಕೆ ಕೆಡವಿದೆ.
ಅದರೆ ಅದನ್ನು ತೆರವುಗೊಳಿಸದೇ ಅಲ್ಲಿಯೇ…ಬಿಡಲಾಗಿದೆ.ಸಾರ್ವಜನಿಕರಿಗೆ ಉಪಕಾರವಾಗುತ್ತಿದ್ದ ಬಸ್ಸು ನಿಲ್ದಾಣವನ್ನು ಕೆಡವಿದ ಕಾರಣ ಮತ್ತೆ ವಿದ್ಯಾರ್ಥಿಗಳು ಸಾರ್ವಜನಿಕರು ಸುರಿಯುವ ಮಳೆಯಲ್ಲಿಯೇ ಬಸ್ಸಿಗಾಗಿ ಕಾಯುವ ಪರಿಸ್ಥಿತಿಯನ್ನು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನಗರ ಸಭೆ ಅಧಿಕಾರಿಗಳು ತಂದೊಡ್ಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿಯ ಕೊಡಂಕೂರು ವಿಷ್ಣುಮೂರ್ತಿ ನಗರದ ರಸ್ತೆಯ ಹೆದ್ದಾರಿ ಬಳಿ ಸಾರ್ವಜನಿಕರಿಗೆ ಬಸ್ಸು ತಂಗುದಾಣವಿಲ್ಲದೇ ಸಮಸ್ಯೆ ಎದುರಾಗಿತ್ತು.ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಜನ ಸುಡು ಬಿಸಿಲು, ಭಾರೀ ಮಳೆ ಸಂಧರ್ಭ ವಿದ್ಯಾರ್ಥಿಗಳು ವಯೋವೃದ್ದರು ಬಸ್ಸು ಕಾಯುವ ಪರಿಸ್ಥಿತಿ ನಿರ್ಮಾಣ ವಾಗಿತ್ತು.ಇದಕ್ಕಾಗಿ ಸಾರ್ವಜನಿಕರು ಹಲವು ಬಾರಿ ನಗರಸಭೆ ಗಮನಕ್ಕೆ ತಂದಿದ್ದರು.ಸ್ಥಳೀಯ ನಗರಸಭೆ ಸದಸ್ಯರ ಗಮನಕ್ಕೂ ತರಲಾಗಿತ್ತು.ಅದರೆ ಈ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ.ಬೇಸಿಗೆ ಕಾಲದಲ್ಲಿ ಸುಡು ಬಿಸಿಲಿನಲ್ಲಿ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಬಸ್ಸಿಗಾಗಿ ಕಾಯಬೇಕಾದ ಪರಿಸ್ಥಿತಿ ಹೀಗಾಗಿ ಸ್ಥಳೀಯರು ಹಾಗೂ ಆಟೋ ಚಾಲಕರು ಕೊಡಂಕೂರಿನಲ್ಲಿ ಉದ್ಯಮ. ನಡೆಸುತ್ತಿರುವ ಪ್ರಸಾದ್ ರಾಜ್ ಕಾಂಚನ್ ಬಳಿ ಒಂದು ಬಸ್ ನಿಲ್ದಾಣ ವನ್ನು ಕಟ್ಟ ಲು ಧನಸಹಾಯ ಕ್ಕಾಗಿ ಕೇಳಿಕೊಂಡಿದ್ದರು.
,ಜನರ ಸಮಸ್ಯೆಗಳ ನ್ನು ಮನಗಂಡ ಅವರು ತಾತ್ಕಲಿಕ ತಗಡು ಶೀಟಿನ ಬಸ್ ನಿಲ್ದಾಣವನ್ನು ಸಾರ್ವಜನಿಕರಿಗಾಗಿ ನಿರ್ಮಿಸಿಕೊಟ್ಟಿದ್ದರು.
ಇದು ನಗರಸಭೆ ಅಡಳಿತ ಪಕ್ಷದಲ್ಲಿರುವ ಬಿಜೆಪಿ ನಾಯಕರಿಗೆ ಸ್ಥಳೀಯವಾಗಿ ತಲೆತಗ್ಗಿಸುವಂತಾಗಿತ್ತು.ಹೀಗಾಗಿ ಇದಕ್ಜೆ ಅಕ್ಷೇಪ ವ್ಯಕ್ತಪಡಿಸಿ ಬಸ್ ನಿಲ್ದಾಣವನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಒತ್ತಡ ಹೇರಿ ಬಸ್ಸು ನಿಲ್ದಾಣವನ್ನು ಕೆಡವಿ ಹಾಕಲಾಗಿದೆ.
ತೆರವು ಗೊಳಿಸುವ ಬದಲು ಕೆಡವಿದ ನಗರಸಭೆ
ರಾಜಕೀಯ ವ್ಯಕ್ತಿಗಳ ಕೀಳು ಮಟ್ದದ ರಾಜಕೀಯ ಎಲ್ಲಿಯವರೆಗೆ ಇದೆ ಎಂದರೆ.ಅನುಮತಿ ಇಲ್ಲದೆ ಕಟ್ಟಿದೆ ಎನ್ನುವ ಬಸ್ಸು ತಂಗುದಾಣವನ್ನು ತೆರವುಗೊಳಿಸಲು ಬಂದ ಜೆಸಿಬಿಗಳು ,ಬರೀ ಅದರ ಮಾಡನ್ನು ನೆಲಕ್ಕುರುಳಿಸಿ ಅಲ್ಲೆ ಬಿಟ್ಟು ಹೋಗಿದೆ.ಆಧಿಕಾರಿಗಳು ಬಸ್ಸು ನಿಲ್ದಾಣದಿಂದ ಸಾರ್ವಜನಿಕರಿಗೆ ಅಗುವ ಉಪಯೋಗವನ್ನು ಅರಿಯುವ ಬದಲು ರಾಜಕೀಯ ವ್ಯಕ್ತಿಗಳ ಒಲೈಸಿಕೊಳ್ಳುವುದಕ್ಕಾಗಿ ಬಸ್ ನಿಲ್ದಾಣ ಕೆಡಿರುವುದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ರಾಜಕೀಯ ಉದ್ದೇಶವಿಲ್ಲದೇ ಸಾರ್ವಜನಿಕರ ಮನವಿ ಮೇರೆಗೆ ಬಸ್ ನಿಲ್ದಾಣವನ್ನು ನಿರ್ಮಿಸಲು ಧನ ಸಹಾಯ ಮಾಡಿದ್ದೆ . ಬಸ್ಸು ನಿಲ್ದಾಣ ನಿರ್ಮಿಸಲು ನಗರಸಭೆಗೆ ಅರ್ಜಿ ಹಾಕಿದೆ.ನಗರಸಭೆ ನೋಟಿಸುಗೂ ಉತ್ತರಿಸಿದೆ.ರಾಷ್ಟೀಯ ಹೆದ್ದಾರಿ ಅಧಿಕಾರಿಗಳಿಗೂ ಪತ್ರ ಬರೆಯಲಾಗಿದೆ. ಜನರು ಬಿಸಲಿನ ತಾಪದಿಂದ ,ಮಳೆಯಿಂದ ಸಮಸ್ಯೆ ಅಗುತ್ತಿರುವ ಕಾರಣಕ್ಕೆ ಸಹಾಯ ಮಾಡುವಂತೆ ನಮ್ಮಲ್ಲಿ ವಿನಂತಿ ಮಾಡಿದ ಕಾರಣಕ್ಕಾಗಿ ಸ್ವಂತ ಹಣ ಬಳಕೆ ಮಾಡಿ ನಿರ್ಮಿಸಲಾಗಿತ್ತು
ಬಸ್ಸು ತಂಗುದಾಣ ಅಕ್ರಮವಾಗಿದ್ದರೆ ಸಾರ್ವಜನಿಕರ ಉಪಯೋಗ ಅಗುವ ಉದ್ದೇಶದಿಂದಲಾದರೂ..ನಗರ ಸಭೆ ಮತ್ತುವರ್ಜಿ ವಹಿಸಿ ತಂಗುದಾಣ ನಿರ್ಮಿಸಿಕೊಡಬಹುದಿತ್ತು.ಅದನ್ನು ಸಾರ್ವಜನಿಕರಿಗೆ ಬಳಸಲು ಅವಕಾಶ ಕೊಡಬಹುದಿತ್ತು .ಅದರ ಈ ರೀತಿ ಕೆಡವಿದ್ದು ಸರಿಯಲ್ಲ ಇಂತಹ ಬೆಳವಣಿಗೆ ಸಮಾಜಕ್ಕೆ ಒಳ್ಳೆಯ ಸಂದೇಶವಲ್ಲ ಎಂದು ಕಾಂಚನ್ ಹೇಳಿದ್ದಾರೆ.
ಒಂದೋ… ನಮಗೆ ನಗರಸಭೆ ತಕ್ಷಣ ಬಸ್ ನಿಲ್ದಾಣ ಕಟ್ಟಿ ಕೊಡಬೇಕು ಇಲ್ಲವಾದಲ್ಲಿ ಕೆಡವಿದ ಬಸ್ ನಿಲ್ದಾಣವನ್ನು ದುರಸ್ತಿ ಪಡಿಸಿಕೊಡಬೇಕೆಂದ ಸಾರ್ವಜನಿಕರು ಅಗ್ರಹಿಸಿದ್ದಾರೆ.
ನಗರದಲ್ಲಿರುವ ಅಕ್ರಮ ಕಟ್ಟಡಗಳಿಗೆ ಒಂದು ಕಾನೂನು ಬಡವರಿಗಾಗಿ ಉಪಯೋಗಕ್ಕಿರುವ ಬಸ್ ನಿಲ್ದಾಣಕ್ಕೊಂದು ಕಾನೂನು.
ಉಡುಪಿ ನಗರಸಭೆ ಭ್ರಷ್ಟಚಾರದಲ್ಲಿ ಅಗ್ರ ಸ್ಥಾನದಲ್ಲಿದೆ.ನಗರದಲ್ಲಿ ಹಲವು ಅಕ್ರಮ ಕಟ್ಟಡಗಳು ತಲೆ ಎತ್ತಿವೆ.ನಗರದ ಕ್ಲಾಕ್ ಟವರ್ ಮುಂಭಾಗದಲ್ಲೇ ಸೆಟ್ ಬ್ಯಾಕಿಲ್ಲದ ಕಟ್ಟಡಕ್ಕೆ ಲೈಸನ್ಸ್ ನೀಡಿದೆ.ಕಲ್ಸಂಕ ಬಳಿ ಬಿಲ್ಡರ್ ಒಬ್ಬ ರಾಷ್ಟ್ರೀಯ ಹೆದ್ದಾರಿಗೆ ಬಿಟ್ಟುಕೊಡಬೇಕಾದ ಭೂಮಿ ಬಿಡದೆ.ಅಕ್ರಮವಾಗಿ ಜನರು ನಡೆದಾಡುವ ಫುಟ್ ಪಾತ್ ನಲ್ಲಿ ಬಸ್ ತಂಗುದಾಣ ನಿರ್ಮಿಸಿ ತನ್ನ ಜಾಹೀರಾತು ಹಾಕಿಕೊಂಡಿದ್ದಾನೆ ಇದರ ಬಗ್ಗೆ ನಗರಸಭೆ ಕ್ರಮ ಇಲ್ಲ.ಬನ್ನಂಜೆ ರಸ್ತೆ ಯಲ್ಲಿ ಅಕ್ರವಾಗಿ ನಿಯಮ ಉಲ್ಲಂಘಿಸಿ ಹತ್ತಾರು ಕಟ್ಟಡಗಳು ತಲೆ ಎತ್ತಿವೆ. ಶಿರಿಬೀಡು ಬಳಿ ನಗರಸಭೆಯ ಯಾವುದೇ ಅನುಮತಿಯಿಲ್ಲದೇ ಅಕ್ರಮವಾಗಿ ಲಾಡ್ಜ್ ನಿರ್ಮಿಸಲಾಗಿದೆ.ಅದರೂ ನಗರ ಸಭೆ ಕಣ್ಣು ಮುಚ್ಚಿಕುಳಿತ್ತಿದೆ.ಕಾರ್ಪರೇಶನ್ ಬ್ಯಾಂಕ್ ಬಳಿಯ ಚಿನ್ನದಂಗಡಿ ಅಕ್ರಮವಾಗಿ ಕಟ್ಟಿದ್ದು ಇದಕ್ಕೆ ಉದ್ಯಮ ಪರವಾನಿಗೆಯೇ ಇಲ್ಲ ,ಅದರೂ ರಾಜಾರೋಷವಾಗಿ ವ್ಯಾಪಾರ ನಡೆಸುತ್ತಿದ್ದಾರೆ.ಚಿತ್ತರಂಜನದ ದಾಸ್ ಸರ್ಕಲ್ ಬಳಿ ಚಿನ್ನದ ಅಂಗಡಿ ಅಕ್ರಮ ತೆರವಿಗೆ ನಗರಸಭೆ ಅಂತಿಮ ನೋಟಿಸ್ ನೀಡಿದೆ.ಅದರೆ ಈವರೆಗೂ ಬಿಲ್ಡಿಂಗ್ ತೆರವು ಗೊಳಿಸುವ ಕಾರ್ಯ ನಡೆದಿಲ್ಲ ಇಷ್ಟೆಲ್ಲ ಅಕ್ರಮಗಳು ಕಣ್ಣೆದುರೇ ಇದ್ದರೂ…ಕ್ರಮ ಕೈಗೊಳ್ಳದೇ ಇರುವ ನಗರ ಸಭೆ ಬಿಜೆಪಿ ಅಡಳಿತ ಬಡವರ ಜನಸಮಾನ್ಯರ ಅನುಕೂಲಕ್ಕಾಗಿ ನಿರ್ಮಿಸಿದ ಬಸ್ ನಿಲ್ದಾಣವನ್ನು ಕೆಡವಿದ್ದು ಸರಿಯೇ..? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.