ಬೈಂದೂರು: ಮೂರ್ನಾಲ್ಕು ದಿನಗಳಿಂದ ಸುರಿದ ಭಾರೀ ಗಾಳಿ ಮಳೆಗೆ ನಾಗೂರಿನಲ್ಲಿ ನೂರಾರು ವರ್ಷಗಳ ಹಳೆಯ ಮರದ ಬ್ರಹತ್ ಗಲ್ಲು ರಸ್ತೆ ಮೇಲೆ ಬಿದ್ದಿದೆ.
ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗೂರಿನಿಂದ ಕೊಡೇರಿ ಹೊಸಹಿತ್ಲು ಸಿಂಗಾರ ಗರಡಿಮನೆ ಸಂಪರ್ಕ ರಸ್ತೆಯಲ್ಲಿ ಮರದ ಕೊಂಬೆ ಬಿದ್ದ ಪರಿಣಾಮವಾಗಿ ಎರಡು ವಿದ್ಯುತ್ ಕಂಬ ಧರೆಗೆ ಉರುಳಿದೆ.
ಕೆಲವು ಸಮಯ ರಸ್ತೆ ಸಂಪರ್ಕ ಬಂದ್ ಆಗಿದ್ದು ಸ್ಥಳೀಯರು ನೆರವಿನಿಂದ ಸ್ಥಳೀಯಾಡಳಿತ ವತಿಯಿಂದ ತೆರವುಗೊಳಿಸಲಾಯಿತು
ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ ಖಾರ್ವಿ, ಸದಸ್ಯ ಕ್ರಷ್ಣ ಖಾರ್ವಿ, ಲೈನ್ ಮ್ಯಾನ್ ಉಮೇಶ್ ,ಸಿಬ್ಬಂದಿ ರಮೇಶ್ ಸ್ಥಳೀಯರು ಉಪಸ್ಥಿತರಿದ್ದರು.