ಉಡುಪಿಕಾಪು

ಕಟಪಾಡಿ – ಶಿರ್ವ ರಸ್ತೆ ದುರಸ್ತಿಗೆ 13 ಕೋ. ಪ್ರಸ್ತಾವನೆ ಸಲ್ಲಿಕೆ : ಶಾಸಕ ಗುರ್ಮೆ ಸುರೇಶ್ ಶೆಟ್ಟಿ

ಕಾಪು, ಅ. 26 : ಮಳೆ ಮತ್ತು ಪ್ರಾಕೃತಿಕ ವಿಕೋಪದಿಂದಾಗಿ ತೀವ್ರ ಹಾನಿಗೀಡಾಗಿರುವ ಕಟಪಾಡಿ – ಶಿರ್ವ ರಾಜ್ಯ ಹೆದ್ದಾರಿಯ ಮರು ನಿರ್ಮಾಣಕ್ಕಾಗಿ 13 ಕೋಟಿ ರೂಪಾಯಿ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ತಿಳಿಸಿದ್ದಾರೆ.

ಕೇಂದ್ರ ಸರಕಾರಕ್ಕೆ ಸಿಅರ್ ಎಫ್ ನಿಧಿಯ 6 ಕೋಟಿ ರೂಪಾಯಿ ಮತ್ತು ರಾಜ್ಯ ಸರಕಾರದ ಲೋಕೋಪಯೋಗಿ ಇಲಾಖೆಗೆ 7 ಕೋಟಿ ರೂಪಾಯಿ ವೆಚ್ಚದ ಪ್ರಸ್ತಾವನೆ‌ ಸಲ್ಲಿಸಲಾಗಿದೆ.

ಮಳೆಯ ಕಾರಣಕ್ಕೆ ತೀರಾ ಹದಗೆಟ್ಟು ಹೋಗಿದ್ದ ರಸ್ತೆಯನ್ನು ನಾಲ್ಕೈದು ಬಾರಿ ರಿಪೇರಿ ಮಾಡಿಸಲಾಗಿತ್ತು. ಕೇಂದ್ರ ಸರಕಾರದ ಸಿ.ಆರ್.ಎಫ್ (CRF) ನಿಧಿಯಿಂದ ದ 6 ಕೋಟಿ ಅನುದಾನ ಮಂಜೂರಾಗಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಯಿಂದ 7 ಕೋಟಿ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿದ್ದು ಅನುಮೋದನೆ ಬಾಕಿ ಇದೆ. ಕೂಡಲೇ ರಸ್ತೆ ಮರು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ತಿಳಿಸಿದ್ದಾರೆ.

Related posts

ಕುಂದಾಪುರ: ಸಮುದ್ರದಲ್ಲಿ ಈಜಲು ತೆರಳಿದ ಇಬ್ಬರು ಸಮುದ್ರಪಾಲು

Udupilive News

ಉಡುಪಿ ಆದಿಶಕ್ತಿ ಹೂವಿನ ಅಂಗಡಿಯ ಮಾಲೀಕ ಸುಧಾಕರ ಶೇರಿಗಾರ್ ನಿಧನ

Udupilive News

ಕರಾವಳಿ ಜಿಲ್ಲೆಗಳಲ್ಲಿ ಡ್ರಗ್ಸ್, ಕಾನೂನು ಬಾಹಿರ ಚಟುವಟಿಕೆ ತಡೆಯಲು ಶಾಸಕ ಮಂಜುನಾಥ್ ಭಂಡಾರಿ ಒತ್ತಾಯ

Udupilive News

Leave a Comment