ರಾಜ್ಯರಾಷ್ಟ್ರೀಯ

ಲೌಕಿಕ ಜೀವನ ತೊರೆದು ಸನ್ಯಾಸತ್ವ ಸ್ವೀಕಾರಕ್ಕೆ ಮುಂದಾದ ಇಬ್ಬರು ಯುವತಿಯರು

ದಾವಣಗೆರೆ: ಮದುವೆ ಸಂಭ್ರಮದಲ್ಲಿರಬೇಕಾದ 26 ವರ್ಷದ ಇಬ್ಬರು ಜೈನ ಸಮುದಾಯದ ಯುವತಿಯರು ಸನ್ಯಾಸತ್ವ ಸ್ವೀಕಾರಕ್ಕೆ ಮುಂದಾಗಿದ್ದಾರೆ.

ದಾವಣಗೆರೆ ಮೂಲದ ಯುವತಿ ಮಾನಸಿ ಕುಮಾರಿ ಹಾಗೂ ಗೋಕಾಕ್‍ನ (Gokak) ಮುಮುಕ್ಷ ಭಕ್ತಿ ಕುಮಾರಿಯವರು ಸನ್ಯಾಸತ್ವ ಸ್ವೀಕಾರಕ್ಕೆ ಮುಂದಾಗಿದ್ದಾರೆ. ಮಾನಸಿ ಕುಮಾರಿ ಎಂಎ ಸೈಕಾಲಜಿ ವ್ಯಾಸಾಂಗ ಮಾಡಿದ್ದು, ಮುಮುಕ್ಷ ಭಕ್ತಿ ಕುಮಾರಿ ಎಲ್‍ಎಲ್‍ಬಿ ವ್ಯಾಸಾಂಗ ಮಾಡಿದ್ದಾರೆ.


ಮುಂದಿನ ತಿಂಗಳು 17ರಂದು ಜಾರ್ಖಂಡ್‌ ರುಜುಬಾಲಿಕ ಎಂಬಲ್ಲಿ ಸನ್ಯಾಸತ್ವ ಸ್ವೀಕಾರಕ್ಕೆ ಸಿದ್ಧತೆ ನಡೆದಿದೆ. ಲೌಕಿಕ ಜೀವನ ತೊರೆದು ಅಲೌಕಿಕ ಜೀವನದತ್ತ ಮುಖ ಮಾಡಿದ ಯುವತಿಯರನ್ನು ದಾವಣಗೆರೆಯ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ಮಾಡಲಾಯಿತು. ಇಬ್ಬರು ಕುಟುಂಬಸ್ಥರಿಂದ ಹಾಗೂ ಜೈನ ಸಮುದಾಯದಿಂದ ಔತಣ ಕೂಟ ಏರ್ಪಡಿಸಲಾಗಿತ್ತು.

ದಾವಣಗೆರೆಯಲ್ಲಿ ಇದುವರೆಗೂ 64 ಜನ ಯುವಕ- ಯುವತಿಯರು ಸನ್ಯಾಸತ್ವ ಸ್ವೀಕಾರ ಮಾಡಿದ್ದಾರೆ.

Related posts

ಮುಂದಿನ 5 ವರ್ಷದಲ್ಲಿ ಆಟೋಮೊಬೈಲ್ ಉದ್ಯಮದಲ್ಲಿ ವಿಶ್ವದಲ್ಲೇ ಭಾರತ ನಂಬರ್‌ 1: ಗಡ್ಕರಿ ಭವಿಷ್ಯ

Udupilive News

ಗೌರಿ ಲಂಕೇಶ್ ಹತ್ಯೆಯ ಆರೋಪಿಗಳಿಗೆ ಸನ್ಮಾನ ಪ್ರಕರಣ :ಪ್ರತಿಗಾಮಿ ಶಕ್ತಿಗಳು ರಾಷ್ಟ್ರ ಭಕ್ತಿಯ ಹೆಸರಿನಲ್ಲಿ ರಾಷ್ಟ್ರದ್ರೋಹದ ಕೆಲಸ ಮಾಡುತ್ತಿವೆ – ಇದ್ರೀಸ್ ಹೂಡೆ

Udupilive News

ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಬ್ಬಾಳಿಕೆ ತಡೆಗೆ ಸರ್ಕಾರದ ಕ್ರಮ ಅನಗತ್ಯ ಕಿರುಕುಳ ತಪ್ಪಿಸಲು ನಿಯಮಗಳ ಪಾಲನೆಗೆ ಸೂಚನೆ

Udupilive News

Leave a Comment