ಉಡುಪಿ

ವೆಲ್ಫೇರ್ ಪಾರ್ಟಿ ಉಡುಪಿ ಜಿಲ್ಲಾಧ್ಯಕ್ಷರಾಗಿ ಇದ್ರಿಸ್ ಹೂಡೆ ಅಯ್ಕೆ

ಉಡುಪಿ: ವೆಲ್ಫೇರ್ ಪಾರ್ಟಿ ಉಡುಪಿ ಜಿಲ್ಲಾಧ್ಯಕ್ಷರಾಗಿ ಇದ್ರಿಸ್ ಹೂಡೆ,ಜಿಲ್ಲಾ ಉಪಾಧ್ಯಕ್ಷರಾಗಿ ವಿಜಯ್ ಪಡುಕುದ್ರು, ಅಬ್ದುಲ್ ಅಝೀಜ್ ಉದ್ಯಾವರ, ಸಯ್ಯದ್ ಫರೀದ್ ಅವರನ್ನು ಆಯ್ಕೆ ಮಾಡಲಾಯಿತು.

ಹೂಡೆಯ ಆದರ್ಶ್ ಇಸ್ಲಾಮಿಕ್ ಸೆಂಟರ್ ನಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಡ್ವಕೇಟ್ ತಾಹೀರ್ ಹುಸೇನ್ ಅವರ ನೇತೃತ್ವದಲ್ಲಿ ನಡೆದ ಜಿಲ್ಲಾ ಸಮಿತಿ ಸದಸ್ಯರ ಸಭೆಯಲ್ಲಿ ಚುನಾವಣಾ ಪ್ರಕ್ರಿಯೆ ನೆರವೇರಿತು.

ಪ್ರಧಾನ ಕಾರ್ಯದರ್ಶಿಯಾಗಿ ಯಾಸೀನ್, ಉಪಾಧ್ಯಕ್ಷರಾಗಿ ವಿಜಯ ಪಡುಕುದ್ರು, ಅಬ್ದುಲ್ ಅಝೀಝ್ ಉದ್ಯಾವರ, ಸಯ್ಯದ್ ಫರೀದ್ ಆಯ್ಕೆಗೊಂಡರು. ಕಾರ್ಯದರ್ಶಿಯಾಗಿ ಶಾಹಜಹಾನ್ ತೋನ್ಸೆ,ಮಮ್ತಾಝ್ ಬೇಗಮ್, ಖಜಾಂಚಿಯಾಗಿ ಆಸೀಫ್ ಜಿಡಿ, ಮಾಧ್ಯಮ ಕಾರ್ಯದರ್ಶಿಯಾಗಿ ಶಾರೂಕ್ ತೀರ್ಥಹಳ್ಳಿಯವರನ್ನು ಆಯ್ಕೆ ಮಾಡಲಾಯಿತು. ತೆರವುಗೊಂಡಿದ್ದ ಹೂಡೆ ಘಟಕದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಅಫ್ವಾನ್ ಹೂಡೆ, ಸಂಘಟನಾ ಕಾರ್ಯದರ್ಶಿ ಸ್ಥಾನಕ್ಕೆ ಝೈನುಲ್ಲಾ ಹೂಡೆ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿಗಳಾದ ಕೆಟಿ ಬಶೀರ್, ರಿಝ್ವಾನ್ ಹುಮ್ನಾಬಾದ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related posts

ಮಣಿಪಾಲ: ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ, ಪೊಲೀಸರಿಂದ ದಾಳಿ – ಬಿಹಾರ ಮೂಲದ ಆರೋಪಿ ಬಂಧನ.

Udupilive News

ರಸ್ತೆ ದಾಟುತ್ತಿದ್ದ ಪತಿ ಪತ್ನಿಯ ಬೈಕಿಗೆ ಬಸ್ ಡಿಕ್ಕಿ.ಪತಿ ಸಾವು,ಪತ್ನಿ ಗಂಭೀರ

Udupilive News

ಧರ್ಮಸ್ಥಳ ಪ್ರಕರಣ: ಎಸ್ ಐಟಿ ತನಿಖೆಯಿಂದ ಸತ್ಯಾಸತ್ಯತೆ ಬೆಳಕಿಗೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Udupilive News

Leave a Comment