ಉಡುಪಿ

ನ.9ರಂದು ಉಡುಪಿಯಲ್ಲಿ “ನನ್ನ ನಾಡು ನನ್ನ ಹಾಡು” ಜಿಲ್ಲಾಮಟ್ಟದ ಕನ್ನಡ ಹಾಡುಗಳ ಸ್ಪರ್ಧೆ

ಉಡುಪಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಲಯನ್ಸ್, ರೋಟರಿ ಸದಸ್ಯರು ಹಾಗೂ ಸಾರ್ವಜನಿಕರಿಗೆ ನ.9ರಂದು ಉಡುಪಿ ಅಜ್ಜರಕಾಡಿನ ಪುರಭವನದಲ್ಲಿ “ನನ್ನ ನಾಡು ನನ್ನ ಹಾಡು” ಎಂಬ ಜಿಲ್ಲಾಮಟ್ಟದ ಕನ್ನಡ ಹಾಡುಗಳ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮ ಸಂಯೋಜಕ ನಂದಕಿಶೋರ್ ಕೆಮ್ಮಣ್ಣು ಹೇಳಿದರು.ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸ್ಪರ್ಧೆಯನ್ನು ಲಯನ್ಸ್ 317 ಸಿ ಹಾಗೂ ರೋಟರಿ ಕ್ಲಬ್ ಜಿಲ್ಲೆ 3182 ಒಳಗೊಂಡ ಲಯನ್ಸ್ ಕ್ಲಬ್ ಅಂಬಲಪಾಡಿ, ಕಲ್ಯಾಣಪುರ, ಸಂತೆಕಟ್ಟೆ, ಉಡುಪಿ ಚೇತನ ಹಾಗೂ ರೋಟರಿ ಸಂಸ್ಥೆ ಅಂಬಲಪಾಡಿ, ಕಲ್ಯಾಣಪುರ, ಉಡುಪಿ ಮಿಡ್ ಟೌನ್ ಹಾಗೂ ಬ್ರಹ್ಮಾವರ ಇವರ ವತಿಯಿಂದ ಶ್ರೀ ದುರ್ಗಾ ಮ್ಯೂಸಿಕ್ ಮೀಟ್, ಮಣಿಪಾಲ ಇದರ ಸಹಯೋಗದೊಂದಿಗೆ ಆಯೋಜಿಸಲಾಗಿದೆ ಎಂದರು.
ಸ್ಪರ್ಧೆಯಲ್ಲಿ ಕೇವಲ ಕನ್ನಡ ಭಾಷೆಯ ಗೀತೆಗಳನ್ನು ಮಾತ್ರ ಹಾಡಲು ಅವಕಾಶವಿರುತ್ತದೆ. ಭಾವಗೀತೆ, ಭಕ್ತಿಗೀತೆ, ಜಾನಪದ ಗೀತೆ ಮತ್ತು ಚಲನಚಿತ್ರ ಗೀತೆಗಳನ್ನು ಹಾಡಬಹುದು. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ. ಮೊದಲು ಬಂದ ನೂರು ಹಾಡುಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಭಾಗವಹಿಸಲು ಇಚ್ಛಿಸುವ ಸ್ಪರ್ಧಿಗಳು ತಮ್ಮ ಹಾಡಿನ ವಿಡಿಯೋ ಅಥವಾ ಆಡಿಯೋಗಳನ್ನು ವಾಟ್ಸಾಪ್ ಮೂಲಕ ಮೊಬೈಲ್ ಸಂಖ್ಯೆ 79752 43048 ಕಳುಹಿಸಬೇಕು ಎಂದು ತಿಳಿಸಿದರು.ಸಾರ್ವಜನಿಕರು, ಲಯನ್ಸ್ ಹಾಗೂ ರೋಟರಿ ಈ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಮೊದಲನೆ ಸುತ್ತಿನ ಸ್ಪರ್ಧೆಯಲ್ಲಿ ಆಯ್ಕೆ ಮಾಡಿದ ಪ್ರತಿ ಗುಂಪಿನ 5 ಗಾಯಕರನ್ನು ಅಂತಿಮ ಸುತ್ತಿಗಾಗಿ ಆಯ್ಕೆ ಮಾಡಲಾಗುವುದು. ಸಾರ್ವಜನಿಕರು ನವೆಂಬರ್ 1ರಿಂದ 2 ರೊಳಗೆ, ಲಯನ್ಸ್ ಸದಸ್ಯರು ನವೆಂಬರ್ 3ರಿಂದ 4ರೊಳಗೆ ಮತ್ತು ರೋಟರಿ ಸದಸ್ಯರು ನವೆಂಬರ್ 5ರಿಂದ 6ನೇ ತಾರೀಕಿನೊಳಗೆ ತಮ್ಮ ಹಾಡಿನ ಆಡಿಯೋ ಅಥವಾ ವಿಡೀಯೋವನ್ನು ಕಳುಹಿಸಬೇಕು. ಅಂತಿಮ ಸುತ್ತಿನ ಸ್ಪರ್ಧೆಯನ್ನು ನ.9ರಂದು ಬೆಳಿಗ್ಗೆ 9.30ಕ್ಕೆ ಅಜ್ಜರಕಾಡು ಟೌನ್ ಹಾಲ್ ನಲ್ಲಿ ಆಯೋಜಿಸಲಾಗಿದೆ. ಲಯನ್ಸ್ ಜಿಲ್ಲಾ ಗವರ್ನರ್ ಮೊಹಮ್ಮದ್ ಹನೀಫ್ ಹಾಗೂ ರೋಟರಿ ಗವರ್ನರ್ ದೇವಾನಂದ ಸಿಎ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಸಂಗೀತ ಕಲಾವಿದರ ಸಂಘದ ಅಧ್ಯಕ್ಷೆ ಮುಕ್ತ ಶ್ರೀನಿವಾಸ್ ಭಟ್, ಮಣಿಪಾಲ ಶ್ರೀ ದುರ್ಗಾ ಮ್ಯೂಸಿಕ್ ಮೀಟ್ ಮುಖ್ಯಸ್ಥೆ ತೇಜಸ್ವಿನಿ ಅನಿಲ್ ರಾಜ್, ಅಂಬಲಪಾಡಿ ರೋಟರಿ ಸಂಸ್ಥೆಯ ಕಲ್ಚರಲ್ ಕೋರ್ಡಿನೇಟರ್ ನಾಗಭೂಷಣ್ ಶೇಟ್, ರೋಟರಿ ಉಡುಪಿ ಮಿಡ್ ಟೌನ್ ಅಧ್ಯಕ್ಷ ಪ್ರಭಾಕರ ಶೆಟ್ಟಿ ಇದ್ದರು.

Related posts

ಪ್ರತಿಷ್ಟಿತ ಭಾರತ್ ಬ್ಯಾಂಕಿಗೆ ಬೆಸ್ಟ್ ಹೆಚ್ ಅರ್ ಮ್ಯಾನೇಜ್ಮೆಂಟ್ ಅವಾರ್ಡ್

Udupilive News

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

Udupilive News

ಶಕ್ತಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಇಡೀ ದೇಶಕ್ಕೆ ಪಂಚ ಗ್ಯಾರಂಟಿ ಯೋಜನೆಗಳು ಮಾದರಿ ಉಡುಪಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟನೆ

Udupilive News

Leave a Comment