ಕುಂದಾಪುರಬೈಂದೂರು

ಶತಮಾನ ಕಂಡ ಶಾಲೆಗೆ ರಮಣಶ್ರೀ ಗ್ರೂಪ್‌ನಿಂದ ಸಹಾಯದ ಭರವಸೆ

ಶಾಸಕ ಗುರುರಾಜ್‌ ಗಂಟಿಹೊಳೆ ಸಮ್ಮುಖದಲ್ಲಿ ಯಳಜಿತ್‌ ಸರ್ಕಾರಿ ಶಾಲೆಗೆ ರಮಣಶ್ರೀ ಗ್ರೂಪ್ಸ್‌ ಭೇಟಿಬೈಂದೂರು : ಸಮೃದ್ಧ ಬೈಂದೂರು ಪರಿಕಲ್ಪನೆಯ ಕನಸಿನ ಕೂಸು *300 ಟ್ರೀಸ್‌* ಅಡಿಯಲ್ಲಿ ಗುರುತಿಸಲ್ಪಟ್ಟಂತಹ ಶತಮಾನದ ಬೆಳಕು ಕಂಡ *ಯಳಜಿತ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ* ಗೆ ಬೆಂಗಳೂರಿನ *ರಮಣಶ್ರೀ ಗ್ರೂಪ್‌ನ ಅಧ್ಯಕ್ಷರಾದ ಎಸ್. ಷಡಕ್ಷರಿ* ಯವರು ತಮ್ಮ ಪರಿವಾರ ಸಮೇತವಾಗಿ ಭೇಟಿ ನೀಡಿದರು.ಈಗಾಗಲೇ ನಡೆಯುತ್ತಿರುವ ರಂಗಮಂದಿರ ಮತ್ತು ಎರಡು ತರಗತಿ ಕೋಣೆಗಳ ಕಾಮಗಾರಿಗಳನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿ, ಸಲಹೆ ಸೂಚನೆ ನೀಡಿದರು. ತಮ್ಮ ಟ್ರಸ್ಟ್‌ ವತಿಯಿಂದ 25 ಲಕ್ಷ ರೂ.ಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.
ಕಾಯಕ್ರಮದ ರೂವಾರಿ ಹಾಗೂ ಶಾಲೆಯ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರೂ ಆದ ಶಾಸಕ ಗುರುರಾಜ್‌ ಗಂಟಿಹೊಳೆಯವರು ಉಪಸ್ಥಿತರಿದ್ದು, ಎಸ್‌. ಷಡಕ್ಷರಿಯನ್ನು ಗೌರವಿಸಿ ಅವರ ಉದಾರತೆಯನ್ನು ಶ್ಲಾಘಿಸಿ, ಸರ್ಕಾರಿ ಶಾಲೆಗಳ ಅಭಿವೃದ್ಧಿ ತಾವು ಹಾಕಿಕೊಂಡಿರುವ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಸಮೃದ್ಧ ಬೈಂದೂರು ಪರಿಕಲ್ಪನೆ ಬಗ್ಗೆ ವಿವರಿಸಿದರು.ಶತಮಾನೋತ್ಸವ ಸಮಿತಿ ಅಧ್ಯಕ್ಷ ಮಂಗೇಶ್‌ ಶಾನುಭಾಗ್‌ ಸಂದರ್ಭೋಚಿತವಾಗಿ ಮಾತನಾಡಿದರು. ಸಮೃದ್ಧ ಬೈಂದೂರು ಟ್ರಸ್ಟ್‌ ಅಧ್ಯಕ್ಷ ಸುರೇಶ್‌ ಶೆಟ್ಟಿ ಎಸ್‌ಡಿಎಂಸಿ ಅಧ್ಯಕ್ಷ ರವಿಚಂದ್ರಶೆಟ್ಟಿ, ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.ಮುಖ್ಯಶಿಕ್ಷಕಿ ಪದ್ಮಾವತಿ ಅವರು ಪ್ರಸ್ತಾವಿಕ ಮಾತುಗಳನ್ನಾಡಿದರು. ಸಹ ಶಿಕ್ಷಕ ಸದಾಶಿವ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.

Related posts

ಚಿಲ್ಲರೆ ನೀಡಿದ್ದಕ್ಕೆ ದಲಿತ ಯುವತಿಯ ಮೇಲೆ ಹಲ್ಲೆ: ಜಾತಿ ನಿಂದನೆ,ಎಸ್ ಪಿ ಭೇಟಿ

Udupilive News

ಜಡ್ಕಲ್ – ಮುದೂರು: ಕಸ್ತೂರಿ ರಂಗನ್ ವರದಿಗೆ ವಿರೋಧ – ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ, ಸಂವಾದ

Udupilive News

ದೊಡ್ಡಣಗುಡ್ಡೆಯ ಆಯುರ್ವೇದ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: ತಪ್ಪಿದ ಭಾರೀ ದುರಂತ.

Udupilive News

Leave a Comment