ದಕ್ಷಿಣ ಕನ್ನಡಪುತ್ತೂರು-ಸುಳ್ಯಬೆಳ್ತಂಗಡಿ-ಬಂಟ್ವಾಳಮಂಗಳೂರುಮೂಲ್ಕಿ-ಮೂಡುಬಿದ್ರಿರಾಜ್ಯ

ಮಂಗಳೂರು ಪೊಲೀಸ್ ಇತಿಹಾಸದಲ್ಲೇ ಭರ್ಜರಿ ಬೇಟೆ – 6 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್‌

ಮಂಗಳೂರು: ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಮಂಗಳೂರು ಸಿಸಿಬಿ ಪೊಲೀಸರು (Mangaluru CCB Police)  6 ಕೋಟಿ ರೂ. ಮೌಲ್ಯದ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ. ಜೊತೆಗೆ ಓರ್ವ ನೈಜೀರಿಯನ್‌ ಪ್ರಜೆಯನ್ನ ಬಂಧಿಸಿದ್ದಾರೆ.

ಮಂಗಳೂರು ಪೊಲೀಸ್ ಇತಿಹಾಸದಲ್ಲಿ ಇದು ಅತಿ ದೊಡ್ಡ ಕಾರ್ಯಾಚರಣೆಯಾಗಿದೆ. ಕದ್ರಿ ಪೊಲೀಸರಿಂದ ಅರೆಸ್ಟ್ ಆಗಿದ್ದ ಪೆಡ್ಲರ್ ಹೈದರಾಲಿ ಬೆನ್ನತ್ತಿದ್ದ ಪೊಲೀಸರು, ಎಲ್ಲಿಂದ ಡ್ರಗ್ಸ್ ಪೂರೈಕೆ ಆಗುತ್ತೆ? ಅನ್ನೋ ಬಗ್ಗೆ ಶೋಧ ನಡೆಸಿದಾಗ ನೈಜೀರಿಯಾ ಪ್ರಜೆ ಬಗ್ಗೆ ಮಾಹಿತಿ ಗೊತ್ತಾಗಿದೆ

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ನೈಜೀರಿಯಾ ಪ್ರಜೆ ಪೀಟರ್ ಇಕೇಡಿ ಬೆಲೊನು ಸಿಕ್ಕಿಬಿದ್ದಿದ್ದಾನೆ. ಈತ ಬೆಂಗಳೂರಿನ ವಿವೇಕಾನಂದ ನಗರದಲ್ಲಿ 6 ಕೆಜಿ 300 ಗ್ರಾಂನಷ್ಟು ಡ್ರಗ್ಸ್ ಸ್ಟಾಕ್ ಇಟ್ಟಿದ್ದ, ಅವಧಿ ಮೀರಿದ ವೀಸಾ ಹೊಂದಿದ್ದು, ಅಕ್ರಮವಾಗಿ ನೆಲೆಸಿದ್ದ ಅನ್ನೋದು ಈ ವೇಳೆ ಗೊತ್ತಾಗಿದೆ. ಕೂಡಲೇ ಆತನನ್ನ ಬಂಧಿಸಿ, ಡ್ರಗ್ಸ್‌ಅನ್ನು ಜಪ್ತಿ ಮಾಡಿದ್ದಾರೆ.

ಈತ ಬೆಂಗಳೂರು ನಗರದಿಂದ, ಕರ್ನಾಟಕದ ವಿವಿಧ ಭಾಗಗಳಿಗೆ ಹಾಗೂ ಬೆಂಗಳೂರು ಮೂಲಕ ಕೇರಳಕ್ಕೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಎಂಬ ಶಂಕೆಯೂ ವ್ಯಕ್ತವಾಗಿದೆ. ಒಂದು ಫ್ಲಾಟಲ್ಲಿ ಫ್ಯಾಮಿಲಿ ಇರಿಸಿ, ಇನ್ನೊಂದು ಫ್ಲಾಟಲ್ಲಿ ಡ್ರಗ್ ಸ್ಟಾಕ್ ಇಟ್ಟಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Related posts

ಸುರತ್ಕಲ್: “ನಿನ್ನನ್ನು 24 ತುಂಡು ಮಾಡುವೆ” ಎಂದು ಬೆದರಿಕೆ; ಯುವತಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ – ಆರೋಪಿ ಬಂಧನ .

Udupilive News

ಕಾರ್ಕಳ: ಕರಿಮಣಿ ಮಾಲೀಕ ನೀನಲ್ಲ ಅಂತಾ ಗಂಡನ ಜೊತೆ ರೀಲ್ಸ್  ಮಾಡಿದವಳು ,ಬಾಯ್ ಫ್ರೆಂಡ್ ಜೊತೆ ಸೇರಿ  ಕೊಂದೇ ಬಿಟ್ಟಳು.

Udupilive News

ಮುಲ್ಕಿ: ಮನೆಯ ಅಡುಗೆ ಕೋಣೆಗೆ ನುಗ್ಗಿದ ಚಿರತೆ – ಬೆಚ್ಚಿಬಿದ್ದ ಮನೆಮಂದಿ.!

Udupilive News

Leave a Comment