ಕುಂದಾಪುರಬೈಂದೂರು

ಇತಿಹಾಸ ಪ್ರಸಿದ್ಧ ಗಂಗೊಳ್ಳಿ ಶ್ರೀ ಮಹಾಂಕಾಳಿ ದೇವಸ್ಥಾನದ ಅರ್ಚಕರಿಂದಲೇ ಚಿನ್ನಾಭರಣ ಕಳವು.

ಬೇಲಿಯೇ ಎದ್ದು ಹೊಲ ಮೈಯೋದು ಅಂದ್ರೆ ಇದೇ ಇರಬೇಕು. ಶ್ರದ್ಧೆಯಿಂದ ದೇವಸ್ಥಾನದ ಪೂಜೆ ಮಾಡಬೇಕಾದ ಅರ್ಚಕರು ದೇವರಿಗೆ ಅರ್ಪಿಸಿದ ಚಿನ್ನವನ್ನು ಲಪಟಾಯಿಸಲು ಸಂಚುರೂಪಿಸಿ ಸಿಕ್ಕಿಬಿದ್ದ ಘಟನೆ ಉಡುಪಿ ಜಿಲ್ಲೆ ಕುಂದಾಪುರದಲ್ಲಿ ನಡೆದಿದೆ.

ಇಲ್ಲಿನ ಇತಿಹಾಸ ಪ್ರಸಿದ್ಧ ಗಂಗೊಳ್ಳಿ ಶ್ರೀ ಮಹಾಂಕಾಳಿ ದೇವಸ್ಥಾನದ ದೇವರಿಗೆ ಹಾಕಲಾದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಪೂಜೆ ಮಾಡುವ ಅರ್ಚಕರೇ ಕದ್ದಿರುವ ಘಟನೆ ಬೆಳಕಿಗೆ ಬಂದಿದೆ.ದೇವಸ್ಥಾನದಲ್ಲಿ ಕಳೆದ ಮೇ ತಿಂಗಳಿನಿಂದ ಪೂಜೆ ಮಾಡುತ್ತಿದ್ದ ಅರ್ಚಕ ನರಸಿಂಹ ದೇವರ ಚಿನ್ನಾಭರಣ ಕದ್ದ ಆರೋಪಿ.ಭಕ್ತರು ಹಾಗೂ ಆಡಳಿತ ಮಂಡಳಿಯವರು ದೇವರಿಗೆ ಸಮರ್ಪಿಸಿದ 264 ಗ್ರಾಂ. ತೂಕದ ಚಿನ್ನಾಭರಣಗಳನ್ನು ಅರ್ಚಕ ತೆಗೆದು, ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿದ್ದಾನೆ. ಕಳವಾದ ಚಿನ್ನಾಭರಣದ ಮೌಲ್ಯ 21.12 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಕೆಲ ಚಿನ್ನಾಭರಣಗಳನ್ನು ತೆಗೆದು, ಅದರ ಬದಲು ನಕಲಿ ಚಿನ್ನಾಭರಣಗಳನ್ನು ಇರಿಸಿದ್ದಾನೆ.
ಮಹಾಕಾಳಿ ದೇವಸ್ಥಾನದಲ್ಲಿ ದೇವಿಯ ಮೂರ್ತಿಗೆ ಆಡಳಿತ ಮಂಡಳಿ ಹಾಗೂ ಭಕ್ತಾದಿಗಳು ಸೇವೆ, ಹರಕೆ ರೂಪದಲ್ಲಿ ನೀಡಿದ ಚಿನ್ನಾಭರಣಗಳನ್ನು ದೇವರ ಮೂರ್ತಿಗೆ ಅಲಂಕಾರ ಮಾಡಿದ ರೀತಿಯಲ್ಲಿ ಪ್ರತಿದಿನ ದೇವರ ಮೂರ್ತಿಯ ಮೈಮೇಲೆ ಇರುತ್ತಿತ್ತು. ಸೆ. 21 ರಂದು ಸಂಜೆ 7 ಗಂಟೆ ಸುಮಾರಿಗೆ ದೇವಸ್ಥಾನದ ಗರ್ಭಗುಡಿಯಲ್ಲಿ ಪೂಜೆ ಮಾಡುತ್ತಿದ್ದ ಆರೊಪಿ ಅರ್ಚಕನಲ್ಲಿ ನವರಾತ್ರಿ ಉತ್ಸವದ ಸಲುವಾಗಿ ಚಿನ್ನಾಭರಣಗಳನ್ನು ಶುದ್ದಚಾರ ಮಾಡಲು ನೀಡುವಂತೆ ಹೇಳಿ ಪಡೆದುಕೊಂಡಾಗ ಭಕ್ತರಿಗೆ ಸಂಶಯ ಬಂದಿವೆ. ಆ ಆಭರಣಗಳು ಈ ಹಿಂದೆ ಇದ್ದ ಆಭರಣಗಳಂತೆ ಇರದೇ ಬೇರೆ ರೀತಿಯಲ್ಲಿ ಕಂಡುಬಂದಿದೆ. ವಿಚಾರಿಸಿದಾಗ ಅಸಲಿ ಚಿನ್ನಾಭರಣಗಳನ್ನು ತಾನು ತೆಗೆದಿರುವುದಾಗಿ ಒಪ್ಪಿಕೊಂಡು ಅವುಗಳನ್ನು ತಾನು ವೈಯುಕ್ತಿಕವಾಗಿ ಸ್ವಂತಕ್ಕೆ ಬಳಸಿಕೊಂಡ ಬಗ್ಗೆ ಅರ್ಚಕ ತಿಳಿಸಿದ್ದಾನೆ.
ಅರ್ಚಕನನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.

Related posts

ಉಡುಪಿ ನಗರ ಮದ್ಯೆ ಕತ್ತು ಸೀಳಿ ಸ್ನೆಹಿತನ ಕೊಲೆ.

Udupilive News

ಇಂದ್ರಾಳಿ ಬ್ರಿಡ್ಜ್ ಅವ್ಯವಸ್ಥೆ ವಿರುದ್ದ ಪ್ರತಿಭಟನೆಗೆ ಸಿದ್ದತೆ.ಬ್ರಿಡ್ಜ್ ಬಳಿ ದೌಡಾಯಿಸಿದ ಸಂಸದ,ಶಾಸಕರು.ಜನವರಿ ಹದಿನೈದರೊಳಗೆ ಪೂರ್ಣಗೊಳಿಸುವುದಾಗಿ ಮತ್ತೊಂದು ಭರವಸೆ ನೀಡಿದ ಕೋಟ

Udupilive News

ಇತಿಹಾಸ ಪ್ರಸಿದ್ಧ ಬೈಲೂರು ಮಹಿಷಮರ್ದಿನಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಡಿ.9ರಿಂದ 15ರ ವರೆಗೆ ಶತಚಂಡಿಕಾ ಯಾಗ ಮತ್ತು ಬ್ರಹ್ಮಮಂಡಲ ಸೇವೆ .

Udupilive News

Leave a Comment