ಉಡುಪಿ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ಶನಿವಾರ ಉಡುಪಿ ಜಾಮಿಯ ಮಸೀದಿಗೆ ಸೌಹಾರ್ದ ಭೇಟಿ ನೀಡಿ, ಉಡುಪಿ ಜಿಲ್ಲಾ ಮುಸ್ಲಿ ಒಕ್ಕೂಟದ ಮತ್ತು ಜಾಮಿಯಾ ಮಸೀದಿಯ ಪದಾಧಿಕಾರಿಗಳು ಮತ್ತು ಮುಸ್ಲಿಂ ಸಮಾಜದ ಮುಖಂಡರ ಜೊತೆ ಮಾತುಕತೆ ನಡೆಸಿ ಜಿಲ್ಲೆಯಲ್ಲಿ ಸೌಹಾರ್ದ, ಸಾಮರಸ್ಯ ಕಾಪಾಡಲು ಮತ್ತು ಕಾನೂನಾತ್ಮಕವಾಗಿ ಎಲ್ಲಾ ರೀತಿಯ ಸಮಸ್ಯೆಗೆ ಸ್ಪಂದಿಸುವ ಬಗ್ಗೆ ತಿಳಿಸಿದರು..
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಮೊಹಮ್ಮದ್ ಮೌಲಾ,ಜಾಮಿಯ ಮಸೀದಿಯ ಅಧ್ಯಕ್ಷರಾದ ಮಹಮ್ಮದ್ ರಿಯಾಝ್, ಮುಸ್ಲಿಂ ಸಮಾಜದ ಗಣ್ಯರಾದ, ಇಸ್ಮಾಯಿಲ್ ಕಟಪಾಡಿ, ಪೀರು ಸಾಹೇಬ್, ಶಾಹಿದ್ ಅಲಿ, ಖಾಲಿದ್, ಅಝೀಜ್ ಮುಂತಾದವರು ಉಪಸ್ಥಿತರಿದ್ದರು..