ಉಡುಪಿ

ಜುಲೈ 4, 5 ಮತ್ತು 6 ರಂದು ಹಲಸು – ಮಾವು – ಕೃಷಿ – ಕೌಶಲ ಬೃಹತ್ ಮೇಳ

ಸಾಂಪ್ರದಾಯಿಕ ಉತ್ಪನ್ನ ಉತ್ತೇಜನ ಸಮಿತಿ, ಉಡುಪಿ ಇವರ ಆಶ್ರಯದಲ್ಲಿ ಹಲಸು – ಮಾವು – ಕೃಷಿ – ಕೌಶಲ ಬೃಹತ್ ಮೇಳವನ್ನು
ರೈತ ಸೇವಾ ಕೇಂದ್ರದ ವಠಾರ, ತೋಟಗಾರಿಕಾ ಇಲಾಖೆ, ದೊಡ್ಡಣಗುಡ್ಡೆ, ಉಡುಪಿ ಇಲ್ಲಿ ಜುಲೈ 4, 5 ಮತ್ತು 6 ರಂದು ಬೆಳಗ್ಗೆ 9:00 ರಿಂದ ರಾತ್ರಿ 8:00 ರವರೆಗೆ ಆಯೋಜಿಸಲಾಗಿದೆ.

ಈ ಮೇಳದಲ್ಲಿ ಕೆಂಪು ಹಲಸು, ಚಂದ್ರ ಹಲಸು, ಉಡುಪಿ ಹಲಸು, ವಿವಿಧ ತಳಿಯ ಮಾವಿನ ಹಣ್ಣುಗಳು, ಹಲಸಿನ ಹಣ್ಣಿನ ಖಾದ್ಯ ಗಳಾದ ಹೋಳಿಗೆ – ಜಿಲೇಬಿ – ಸಾಟ್ – ಕಡುಬು – ಮುಳ್ಕ – ಕೇಸರಿ ಬಾತ್ – ಪಾಯಸ – ಹಪ್ಪಳ – ಮಾಂಬುಳ – ಸೆಂಡಿಗೆ – ಚಿಪ್ಸ್ – ಜಾಮ್ – ಗುಜ್ಜೆ ಉಪ್ಪಿನಕಾಯಿ, ಗುಜ್ಜೆ ಪೋಡಿ, ಗುಜ್ಜೆ ಕಬಾಬ್, ಹಲಸಿನ ಐಸ್ ಕ್ರೀಮ್ – ಮಿಲ್ಕ್ ಶೇಕ್, ಉಪ್ಪಡ್ ಪಚ್ಚಿರ್, ಒಣಗಿಸಿದ ಹಲಸು, ಒಣಗಿಸಿದ ಬಾಳೆ ಹಣ್ಣು, ಪತ್ರೊಡೆ, ಮಿಡಿ ಉಪ್ಪಿನಕಾಯಿ, ಮ್ಯಾಂಗೋ ಸಾಟ್, ಮ್ಯಾಂಗೋ ಜ್ಯೂಸ್, ಕಲ್ಪರಸ, ಗೋಳಿ ಸೋಡಾ, ಕೈಮಗ್ಗ – ಖಾದಿ ಬಟ್ಟೆಗಳು, ಕೋಲ್ಕತ್ತಾ ಸೀರೆಗಳು, ಗಿಡಗಳ ಭಾರಿ ಸಂಗ್ರಹ ಇರುವ ನರ್ಸರಿ, ತರಕಾರಿ ಗೆಡ್ಡೆ ಮತ್ತು ಬೀಜಗಳು, ಆಯುರ್ವೇದಿಕ್ ಮತ್ತು ಗೋ ಉತ್ಪನ್ನಗಳು, ಮತ್ತಿತರ ಗ್ರಹ ಉತ್ಪನ್ನಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ ಜರುಗಲಿದೆ.

ಉದ್ಘಾಟನಾ ಅವಧಿಯು ದಿನಾಂಕ 4.7.2025 ಅಪರಾಹ್ನ 3 ರಿಂದ 4 ಗಂಟೆವರೆಗೆ ಜರುಗಲಿದೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮಾನ್ಯ ಸಂಸದರು ಸನ್ಮಾನ್ಯ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಮೇಳವನ್ನು ಉದ್ಘಾಟಿಸಲಿರುವರು

ಮುಖ್ಯ ಅತಿಥಿಗಳಾಗಿ ಉಡುಪಿಯ ಮಾನ್ಯ ಶಾಸಕರು ಶ್ರೀ ಯಶಪಾಲ್ ಎ ಸುವರ್ಣ,ಉಡುಪಿ ನಗರಸಭೆಯ ಮಾನ್ಯ ಅಧ್ಯಕ್ಷರು ಶ್ರೀ ಪ್ರಭಾಕರ ಪೂಜಾರಿ, ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ದಿವಾನರು ಶ್ರೀ ನಾಗರಾಜ ಆಚಾರ್ಯ, ಪ್ರಗತಿಪರ ಕೃಷಿಕರು-ಸಾಮಾಜಿಕ ಕಾರ್ಯಕರ್ತರು ಶ್ರೀ ನವೀನ್ ಶೆಟ್ಟಿ ಕುತ್ತ್ಯಾರು, ಲಯನ್ಸ್ ಜಿಲ್ಲೆ 317ಸಿಯ ಜಿಲ್ಲಾ ಗವರ್ನರ್ ಲ| ಸಪ್ನಾ ಸುರೇಶ್,
ಪಡುಬಿದ್ರಿ ಯ ಉದ್ಯಮಿ
ಶ್ರೀ ಉದಯ್ ಕುಮಾರ್ ಶೆಟ್ಟಿ ಇನ್ನಾ, ಶ್ರೀ ಕೃಷ್ಣ ಪೆಟ್ರೋಲಿಯಂ ಇಂದ್ರಾಳಿ ಯ ಮಾಲಕರು ಶ್ರೀ ಲಕ್ಷ್ಮಿಕಾಂತ್ ಬೆಸ್ಕೂರ್, ಸಹಕಾರ ಭಾರತಿ ಉಡುಪಿ ಜಿಲ್ಲೆಯ ಅಧ್ಯಕ್ಷರು ಶ್ರೀ ದಿನೇಶ್ ಹೆಗ್ಡೆ ಆತ್ರಾಡಿ,
ಉಡುಪಿ ಜಿಲ್ಲೆ ಯ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರು ಶ್ರೀ ರಾಜು ಎಂ ಎಸ್, ತೋಟಗಾರಿಕಾ ಇಲಾಖೆ ಉಡುಪಿಯ ಸಹಾಯಕ ನಿರ್ದೇಶಕರು
ಶ್ರೀ ಸುನಿಲ್ ಕುಮಾರ್ ವೈ ಹೆಚ್ ಭಾಗವಹಿಸಲಿರುವರು.

Related posts

ದೈವಜ್ಞ ಸೊಸೈಟಿ ಬ್ಯಾಂಕ್ ಚುನಾವಣೆಯಲ್ಲಿ ಸತ್ಯನಾರಾಯಣ ಶೇಟ್ ಗೆ ಭರ್ಜರಿ ಗೆಲುವು.ಪ್ರತಿಸ್ಪರ್ಧಿ ಭಾಸ್ಕರ್ ಶೇಟ್ ಗೆ ಹೀನಾಯ ಸೋಲು.

Udupilive News

ದುಬೈನ ಫಾರ್ಚ್ಯೂನ್ ಗ್ರೂಪ್ ಆಫ್ ಹೋಟೆಲ್ಸ್ ಸಂಸ್ಥೆಗೆ 2.5 ಕೋಟಿ ವಂಚನೆ | ಜೆ.ಎಂ.ಎಫ್.ಸಿ‌ ನ್ಯಾಯಾಲಯ ಆರೋಪಿಗೆ ನೀಡಿದ್ದ ಜಾಮೀನು ಆದೇಶ ರದ್ದುಗೊಳಿಸಿದ ಹೈಕೋರ್ಟ್

Udupilive News

ಅಜ್ಜರಕಾಡು ಬ್ಯಾಡ್ಮಿಂಟನ್ ಕ್ಲಬ್ ಟೂರ್ನಮೆಂಟ್- ಬ್ಲೇಸರ್ ತಂಡಕ್ಕೆ ಪ್ರಶಸ್ತಿ

Udupilive News

Leave a Comment